ರಾಯಬಾಗ: ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಲು ಹಾಗೂ ಶಾಲೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಯಲು ರಂಗಮAದಿರ ಅವಶ್ಯವಿರುವುದರಿಂದ ಶಾಲೆಯ ಬಯಲು ರಂಗಮಂದಿರ ನಿರ್ಮಿಸಲು ಅನುದಾನ ಮಂಜೂರು ಮಾಡಿಸಲಾಗಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಪಟ್ಟಣದ ತಾಲೂಕು ಶಾಲೆಯ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾದ ೧೫ ಲಕ್ಷ ರೂ. ಅನುದಾನದಲ್ಲಿ ಬಯಲು ರಂಗಮಂದಿರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಹಳೆಯ ಬಯಲು ರಂಗ ಮಂದಿರ ಜಾಗದಲ್ಲಿ ಈಗ ಹೊಸ ಬಯಲು ರಂಗಮಂದಿರ ನಿರ್ಮಿಸಲಾಗುತ್ತಿದೆ. ಶಾಲೆಯಲ್ಲಿ ಜರುಗುವ ಎಲ್ಲ ಸಾಂಸ್ಕೃತಿ ಕಾರ್ಯಕ್ರಮಕ್ಕೆ ಅವಶ್ಯವಿರುವ ವೇದಿಕೆ ನಿರ್ಮಾಣವಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಎಇಇ ಎಸ್.ಎಸ್.ಹೊಸಮನಿ, ದೈಹಿಕ ಪರಿವೀಕ್ಷಕ ಎಂ.ಪಿ.ಜಿರಗ್ಯಾಳ, ಮುಖ್ಯ ಶಿಕ್ಷಕಿ ಎಂ.ಬಿ.ಪಟ್ಟಣ, ಸದಾಶಿವ ಘೋರ್ಪಡೆ, ಸದಾನಂದ ಹಳಿಂಗಳಿ, ಮಹೇಶ ಕರಮಡಿ, ಜಿಯಾವುಲ್ಲಾ ಮುಲ್ಲಾ, ಎಂ.ಆರ್.ಸಯ್ಯದ್, ಸುರೇಶ ಮಾಳಿ, ಸುಭಾಷ ಕಾಂಬಳೆ, ಪರಶುರಾಮ ಪೂಜಾರಿ, ರಾಕೇಶ ಕಟ್ಟಿಮನಿ, ರಿತೇಶ ಅವಳೆ, ಭಾರತಿ ಲೋಹಾರ, ಅನಿಲ ಕೊರವಿ, ಮಹೇಶ ಕುಲಗುಡೆ, ಅಜಿತ್ ಜಾಧವ, ಅದಂ ಪಠಾಣ, ಆರ್.ಟಿ.ಅರಬಳ್ಳಿ ಇತರರಿದ್ದರು.