ಜಿಲ್ಲೆ

ರಂಗನಾಥಸ್ವಾಮಿ ದೇಗುಲ ಕಳಸಾರೋಹಣ 20ಕ್ಕೆ

Chitradurga - Desk - Pranav Kumar

ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ಶಿವಗಂಗಾ ಗ್ರಾಮದ ಮರಡಿ ಶ್ರೀರಂಗನಾಥ ಸ್ವಾಮಿ ದೇಗುಲದಲ್ಲಿ ಆ. 20, 21ರಂದು ಶಿಖರ ಕಳಸಾರೋಹಣ, ನವಗ್ರಹ ವಿಗ್ರಹಗಳ ಪ್ರತಿಷ್ಠಾಪನೆ ಸೇರಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ.

20ರಂದು ಬೆಳಗ್ಗೆ 8ಕ್ಕೆ ಗ್ರಾಮದೇವತೆಗಳನ್ನು ಮಂಗಳವಾದ್ಯಗಳೊಂದಿಗೆ ಸ್ವಾಮಿಯ ಸನ್ನಿಧಿ ಬಳಿ ಕರೆತರುವುದು. 9ಕ್ಕೆ ಗಣಪತಿ ಆರಾಧನೆ, ವಾಸುದೇವ ಪುಣ್ಯಹಃ, ರಕ್ಷಾ ಬಂಧನ, ಧ್ವಜಾರೋಹಣ, ದೇವನಾಂದಿ ಅಂಕೋರಾರ್ಪಣ, ಸಪ್ತಋಷಿಗಳ ಆರಾಧನೆ, ನವ ಕಳಸ, ನವಧಾನ್ಯ, ಅಷ್ಠಾಯುಧ ಕಳಸ, ಪಂಚಕಲಸ ಸ್ಥಾಪನೆ, ಪಂಚಗವ್ಯ ಪುಣ್ಯಾಹಃ, ಸಂಜೆ 6ಕ್ಕೆ ಶಾಂತಿ ಹೋಮ, ರಾಕ್ಷೋಭ್ನ, ಗಣ, ನವಗ್ರಹ, ಮೃತ್ಯುಂಜಯ, ಜಯಾಧಿ, ದುರ್ಗಾ, ನವಗ್ರಹಗಳ ಬಿಂಬಶುದ್ಧಿ ತತ್ವನ್ಯಾಸಾಧಿಗಳ ಹೋಮ ನೆರವೇರಲಿದೆ.

21ರಂದು ಮುಂಜಾನೆ 4.15ರಿಂದ 5.21ರೊಳಗೆ ನವಗ್ರಹ ವಿಗ್ರಹ ಪ್ರತಿಷ್ಠಾಪನೆ, ಶ್ರೀರಂಗನಾಥ ಸ್ವಾಮಿಯ ಮೂಲಮಂತ್ರ ಪೂರಕ, ಶ್ರೀಸೂಕ್ತ, ಪುರುಷೋತ್ತಮ, ಸುದರ್ಶನ ಹೋಮದೊಂದಿಗೆ ಪೂರ್ಣಾಹುತಿ ಜರುಗಲಿದೆ. ಬೆಳಗ್ಗೆ 11.15ರಿಂದ 12.05ರೊಳಗೆ ಸ್ವಾಮಿಯ ಶಿಖರ ಕಳಸಾರೋಹಣ ಅಂಗವಾಗಿ ಗಂಗಾಪೂಜೆ, ಕುಂಭಾಭಿಷೇಕ, ಕಳಸಾರೋಹಣ, ಅಷ್ಟಾವಧಾನ ಸೇವೆ, ಬಲಿಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ಸೇವೆ ನೆರವೇರಲಿದೆ.

ಹೋಮ ಒಳಗೊಂಡು ಧಾರ್ಮಿಕ ಪೂಜಾ ಕೈಂಕರ್ಯವನ್ನು ಭದ್ರಾವತಿ ರಾಮೇಶ್ವರ ದೇಗುಲದ ಪ್ರಧಾನ ಅರ್ಚಕ ರಾಮಾನುಜ ಅಯ್ಯಂಗಾರ್ ಮತ್ತು ತಂಡದವರು ನೆರವೇರಿಸಲಿದ್ದಾರೆ ಎಂದು ಸದ್ಭಕ್ತರು, ಗ್ರಾಮಸ್ಥರು ತಿಳಿಸಿದ್ದಾರೆ.