ಜಿಲ್ಲೆ

ರಂಗಚೇತನ ಗವೀಶ ಹಿರೇಮಠರು ಇನ್ನಿಲ್ಲ

ಕಲಬುರಗಿ: 13 ಪ್ರಣಯಮುಕ್ತ ಕವಿ, ಪ್ರಖ್ಯಾತ ಸಾಹಿತಿ, ಅಂಕಣ ಬರಹಗಾರ ಗವೀಶ ಹಿರೇಮಠ (74) ಅವರು ಗುರುವಾರ ನಿಧನ ಹೊಂದಿದರು.
ಮೂತ್ರಾಷಯ ಅರ್ಬುದ ಖಾಯಿಲೆಯಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ತಾಯಿ, ಪತ್ನಿ, ಓರ್ವ ಪುತ್ರ ಸೇರಿ ಅಪಾರ ಬಳಗವನ್ನು ಅಗಲಿದ್ದಾರೆ. ಸ್ವಗ್ರಾಮ ಬಿಸರಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆ 10ಕ್ಕೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಬಿಸರಹಳ್ಳಿಯಲ್ಲಿ 1946 ಸೆ.8ರಂದು ಜನಿಸಿದ ಗವೀಶ ಅವರು, ಕಾವ್ಯ, ಕಾದಂಬರಿ, ನಾಟಕ, ಚರಿತ್ರೆ ಅಭಿನಂದನಾ ಗ್ರಂಥ, ಸಂಪಾದನಾ ಗ್ರಂಥ ಹೀಗೆ 50 ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ ಡಾ. ಜವರೇಗೌಡ, ವಿ.ಕೃ.ಗೋಕಾಕ್, ಡಾ. ಹಾ.ಮಾ. ನಾಯಕ, ಕೆ.ಎಸ್. ನರಸಿಂಹಸ್ವಾಮಿ, ಬರಗೂರ ರಾಮಚಂದ್ರಪ್ಪ, ಜಿ.ಎಂ. ಶಿರಹಟ್ಟಿ ಸೇರಿ ಮೊದಲಾದವರಿಂದ ಪ್ರಶಂಸೆ ಪಡೆದಿದ್ದರು. ಕನರ್ಾಟಕ ಲಲಿತಕಲಾ ಅಕಾಡೆಮಿ, ನಾಟಕ ಅಕಾಡೆಮಿ ಪುಸ್ತಕ ಪ್ರಶಸ್ತಿ, ಗುಲ್ಬರ್ಗ ವಿವಿ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಟ್ರಸ್ಟ್ ಪ್ರಶಸ್ತಿ, ಕನ್ನಡಜ್ಯೋತಿ ಪ್ರಶಸ್ತಿ ಸೇರಿ ಸಾಕಷ್ಟು ಪುರಸ್ಕಾರಗಳು ಲಭಿಸಿವೆ. ಇದಲ್ಲದೆ ಕನ್ನಡ ವೃತ್ತಿ ರಂಗಭೂಮಿಗಾಗಿ 6 ದಶಕ ಅವಿರತವಾಗಿ ದುಡಿದು ರಂಗನಟರ ಬಾಳಿಗೆ ದೀವಟಿಗೆಯ ಹಾಗೆ ಬೆಳಕುಕೊಟ್ಟಿದ್ದಾರೆ.