ಜಿಲ್ಲೆ

ರಂಗ ಗೀತೆ ತರಬೇತಿ ಶಿಬಿರ ಫೆ.20ರಿಂದ

ಕಲಬುರಗಿ: ರಂಗಾಯಣದಿಂದ ಫೆ.೨೦ರಿಂದ ೨೨ರವರೆಗೆ ಸಂಗೀತ ವಿದ್ಯಾರ್ಥಿಗಳಿಗೆ ರಂಗಗೀತೆಗಳ ತರಬೇತಿ ಶಿಬಿರವನ್ನು ನಗರದ ರಂಗಾಯಣ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ತಿಳಿಸಿದರು.

ಫೆ.೨೦ರಂದು ಬೆಳಗ್ಗೆ ೧೧ಕ್ಕೆ ಮೈಸೂರಿನ ರಂಗ ಸಂಗೀತ ನಿರ್ದೇಶಕ ಚಂದ್ರಶೇಖರಾಚಾರ್ ಹೆಗ್ಗೊಠಾರ ಉದ್ಘಾಟಿಸಲಿದ್ದು, ತರಬೇತಿ ಶಿಬಿರದ ನಿರ್ದೇಶಕ ಶಂಭುಲಿAಗ ವಾಲ್ದೊಡ್ಡಿ ಗೌರವ ಉಪಸ್ಥಿತರಿದ್ದು, ಗುವಿವಿ ಸಂಗೀತ ವಿಭಾಗದ ಡಾ.ಲಕ್ಷಿö್ಮÃ ಶಂಕರ ಜೋಶಿ, ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯ ಶಂಕರ ಹೂಗಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಫೆ.೨೨ರಂದು ಸಂಜೆ ೫ಕ್ಕೆ ಸಮಾರೋಪ ನಡೆಯಲಿದ್ದು, ಎನ್‌ವಿ ಸಂಗೀತ ವಿಭಾಗದ ಮುಖ್ಯಸ್ಥ ಡಾ.ಮಹೇಶಕುಮಾರ ಬಡಿಗೇರ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಅತಿಥಿಗಳಾಗಿ ಡಾ.ರೇಣುಕಾ ಹಾಗರಗುಂಡಗಿ ಭಾಗವಹಿಸಲಿದ್ದಾರೆ. ಸಂಜೆ ೫.೩೦ಕ್ಕೆ ಶಿಬಿರಾರ್ಥಿಗಳಿಂದ ರಂಗ ಗೀತೆಗಳ ಗಾಯನ ನಡೆಯಲಿದೆ ಎಂದರು.

ಶಿಬಿರದಲ್ಲಿ ನಗರದ ಗುಲ್ಬರ್ಗ ವಿವಿ, ವಿ.ಜಿ.ಮಹಿಳಾ ಕಾಲೇಜು, ಶರಣಬಸವ ವಿವಿ, ಶರಣಬಸವೇಶ್ವರ ಕಲಾ ಮಹಾವಿದ್ಯಾಲಯ, ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಮಹಾವಿದ್ಯಾಲಯ, ರೇಶ್ಮಿ ಮಹಾವಿದ್ಯಾಲಯದ ಸಂಗೀತ ವಿಭಾಗದ ಸುಮಾರು ೪೦ ಶಿಬಿರಾರ್ಥಿಗಳಿಗೆ ರಂಗಗೀತೆಗಳ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಅನುಭವಿಗಳಿಂದ ತರಬೇತಿ: ಬೀದರ್‌ನ ಖ್ಯಾತ ಜಾನಪದ ಕಲಾವಿದ ಶಂಭುಲಿAಗ ವಾಲ್ದೊಡ್ಡಿ ಅವರು ರಂಗಗೀತೆಗಳ ತರಬೇತಿ ನೀಡಲಿದ್ದಾರೆ. ಕಿರುತೆರೆಯ ವಿವಿಧ ಸಂಗೀತ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ, ಅಮೆರಿಕದ ನಾವಿಕ, ಅಕ್ಕ ಸಮ್ಮೇಳನದಲ್ಲಿ ಗಾಯನ ಮಾಡಿದ್ದಾರೆ. ರಾಜ್ಯ, ರಾಷ್ಟçಮಟ್ಟದ ಹಲವು ಪ್ರಶಸ್ತಿಗೆ ಭಾಜನರಾಗಿದ್ದು, ಮೂರು ದಿನ ತರಬೇತಿ ನೀಡಲಿದ್ದಾರೆ.

ಮೈಸೂರಿನ ಚಂದ್ರಶೇಖರಾಚಾರ್ ಹೆಗ್ಗೊಠಾರ ಅವರು ಬಿ.ವಿ.ಕಾರಂತರ ರಂಗಸAಗೀತ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ನಾಟಕ ಪ್ರದರ್ಶನ, ನಿರ್ದೇಶನ, ಅಭಿನಯ, ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜ್ಯ, ಅಂತಾರಾಜ್ಯದ ನೂರಾರು ರಂಗಗೀತೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದು, ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ ಎಂದರು.

ರAಗಾಯಣ ಉಪ ನಿರ್ದೇಶಕಿ ಜಗದೀಶ್ವರಿ ನಾಸಿ ಇದ್ದರು.