ಜಿಲ್ಲೆ

ಯೋಧರ ಸ್ಮರಣಾರ್ಥ ಶಿಬಿರಗಳು ನಡೆಯಲಿ

Mysuru - Desk - Yashavanth Kumar N

ಕಿಕ್ಕೇರಿ: ಯೋಧರು ಹಾಗೂ ರೈತರ ನೆನಪಿನಲ್ಲಿ ಆರೋಗ್ಯ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದು ಶಾಸಕ ಎಚ್.ಟಿ. ಮಂಜು ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಕರ್ನಾಟಕ ಮಾನವ ಹಕ್ಕು ಜನ ಸೇವಾ ಸಮಿತಿ ಸಹಯೋಗದಲ್ಲಿ ವೀರ ಯೋಧ ಜನಾರ್ಧನಗೌಡ ಸ್ಮರಣಾರ್ಥ ಶನಿವಾರ ಆಯೋಜಿಸಿದ್ದ ನೇತ್ರ, ಆರೋಗ್ಯ ಉಚಿತ ತಪಾಸಣೆ ಹಾಗೂ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಯೋಧರು ಹಾಗೂ ಮಹನೀಯರ ಹೆಸರಿನಲ್ಲಿ ಎಲ್ಲೆಡೆ ಉಚಿತ ಶಿಬಿರಗಳು ನಡೆಯಬೇಕು ಎಂದರು.

ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ ಮಾತನಾಡಿ, ನಮ್ಮ ಜೀವಿತಾವಧಿಯಲ್ಲಿ ಮಾಡಿದ ಸತ್ಕಾರ್ಯ ಮರಣ ನಂತರವೂ ಉಳಿಯಲಿವೆ. ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿ ಜತೆಗೆ ಮತ್ತೊಂದು ಜೀವ ಉಳಿಸಲು ಸಾಧ್ಯ ಎಂದು ಯುವಕರಿಗೆ ಕಿವಿ ಮಾತನಾಡಿದರು.

ಶಿಬಿರದಲ್ಲಿ ರಕ್ತದಾನ, ಬಿಪಿ, ಮಧುಮೇಹ, ನೇತ್ರ, ಇಸಿಜಿ ಸೇರಿದಂತೆ ಹಲವು ಕಾಯಿಲೆ ತಪಾಸಣೆ ಮಾಡಲಾಯಿತು. ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ, ರಾಜ್ಯ ಸಹಕಾರ ಮಾರಾಟ ಮಹಾಮಂಡಲ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ, ಬಿ.ಎಂ.ಕಿರಣ್, ಕೃಷ್ಣೇಗೌಡ, ಕಾಯಿ ಮಂಜೇಗೌಡ, ರಮೇಶ್, ಎಸ್.ಕೆ.ಬಾಲಕೃಷ್ಣ, ಗ್ರಾಪಂ ಅಧ್ಯಕ್ಷೆ ತಾಯಮ್ಮ, ಉಪಾಧ್ಯಕ್ಷೆ ಸರಸ್ವತಿ, ಪ್ರಾಂಶುಪಾಲ ವಿನೋದಸಿಂಗ್, ಬಸವರಾಜು, ಭಾರತಿ ಪ್ರಕಾಶ್, ಗ್ರಾಪಂ ಸದಸ್ಯರಾದ ಪೃಥ್ವಿ, ಜೆ.ಜೆ.ರಂಜಿತಾ, ಜನಾರ್ಧನಗೌಡ ಮತ್ತಿತರರಿದ್ದರು.