ಸಿರಿಗೇರಿ: ಕೌಟುಂಬಿಕ ಸಮಸ್ಯೆಗಳನ್ನು ಬದಿಗಿಟ್ಟು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿರುವ ವೀರ ಯೋಧರನ್ನು ಸ್ಮರಿಸಬೇಕೆಂದು ಪಾ.ಕೃ.ಪ. ಸಹಕಾರ ಸಂಘದ ನಿರ್ದೇಶಕ ಎಸ್.ಎಂ.ನಾಗರಾಜಸ್ವಾಮಿ ಹೇಳಿದರು.
ಗ್ರಾಮದ ಹುತಾತ್ಮ ಯೋಧ ಮಂಜುನಾಥ ಅವರ ಸ್ಮಾರಕದ ಬಳಿ ನಿಮಗಾಗಿ ನಾವು ಸಂಸ್ಥೆ ಗ್ರಾಮ ಘಟಕದ ವತಿಯಿಂದ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಸಹಕಾರ ಸಂಘದ ನಿರ್ದೇಶಕ ಹಾಗಲೂರು ಮಲ್ಲನಗೌಡ ಮಾತನಾಡಿ, ದೇಶದ ಸಾರ್ವಭೌಮತ್ವದ ಉಳಿವಿಗಾಗಿ ಹೋರಾಡಿ ಮಡಿದ ಯೋಧರ ಆದರ್ಶಗುಣಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು.
ಪ್ರಧಾನ ಕಾರ್ಯದರ್ಶಿ ಪುನೀತ್, ಖಜಾಂಚಿ ಶಿವಾಜಿರಾವ್, ಪ್ರಮುಖರಾದ ಬಿ.ಸೋಮಶೇಖರಪ್ಪ, ಸಿ.ಎಂ.ನಾಗರಾಜಸ್ವಾಮಿ, ಗರ್ಜಿಲಿಂಗಪ್ಪ, ಬಕ್ಕಾಡೆ ನಾಗೇಂದ್ರಪ್ಪ, ಮೆಡಿಕಲ್ ಚಾಂದ್, ನಿಜಾಮುದ್ದೀನ್, ಬಿ.ವೀರೇಶ್, ಬಕ್ಕಾಡೆ ಕೊಮಾರೆಪ್ಪ, ನಟರಾಜಸ್ವಾಮಿ ಇತರರು ಇದ್ದರು.