ನಾಪೋಕ್ಲು: ಲಯನ್ಸ್ ಸಂಸ್ಥೆ ನಾಪೋಕ್ಲು ಮತ್ತು ಲಿಯೋ ಸಂಸ್ಥೆಯ ಆಶ್ರಯದಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಬುಧವಾರ ಸ್ಥಳೀಯ ಮಹಿಳಾ ಸಮಾಜದಲ್ಲಿ ಯೋಧನನ್ನು ಸನ್ಮಾನಿಸುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಕನ್ನಂಬಿರ ಸುಧಿ ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಹಾಗೂ ಕರೊನಾ ಸಂದರ್ಭದಲ್ಲಿ 30ಕ್ಕೂ ಅಧಿಕ ಮೃತ ದೇಹಗಳನ್ನು ಅಂತ್ಯಕ್ರಿಯೆ ಮಾಡಲು ಶ್ರಮಿಸಿದ್ದಲ್ಲದೆ ಕ್ರೀಡಾ ತರಬೇತುದಾರರು ಆಗಿರುವ ನಿವೃತ್ತ ಯೋಧ ಕೇಟೋಳಿರ ಡಾಲಿ ಅಚ್ಚಪ್ಪ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಲಯನ್ಸ್ ಪ್ರಾಂತಪಾಲರ ಸಂಯೋಜಕ ಪಂಚಮ್ ತಿಮ್ಮಯ್ಯ, ಸೇವಾ ಸಂಯೋಜಕ ಮುಕ್ಕಾಟಿರ ವಿನಯ್ , ಸದಸ್ಯರಾದ ರತ್ನಾ ಚರಮಣ, ಲಿಯೋ ಸಂಸ್ಥೆಯ ಉಪಾಧ್ಯಕ್ಷ ಮಾದೆಯಂಡ ರೋಹನ್, ಕೇಟೋಳಿರ ಕುಟ್ಟಪ್ಪ, ಡಾ.ಬೋಪ್ಪಂಡ ಜಾಲಿ ಬೋಪಯ್ಯ, ಕುಂಚೆಟ್ಟಿರ ಸುಧಿ, ರೇಷ್ಮಾ, ಅಪ್ಪಾರಂಡ ಸುಭಾಷ್, ಲವ ಕಾಳಪ್ಪ, ಕಾಂಡಟಡ ಪೊನ್ನಣ್ಣ, ತಿಮ್ಮಯ್ಯ, ಮಂದಪಂಡ ಸತೀಶ್ , ಖಜಾಂಚಿ ಬನ್ಸ್ ಭೀಮಯ್ಯ, ವಿನಿತಾ ತಿಮ್ಮಯ್ಯ, ಕಲಿಯಂಡ ಸಾಬು ಅಯ್ಯಣ್ಣ, ಬೊಪ್ಪೆರ ಜಯ ಉಪಸ್ಥಿತರಿದ್ದರು.
ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ನಾಪೋಕ್ಲುವಿನ ಲಯನ್ಸ್ ಸಂಸ್ಥೆ ಮತ್ತು ಲಿಯೋ ಸಂಸ್ಥೆಯ ಆಶ್ರಯದಲ್ಲಿ ನಿವೃತ್ತ ಯೋಧ ಕೇಟೋಳಿರ ಡಾಲಿ ಅಚ್ಚಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕನ್ನಂಬಿರ ಸುಧಿ ತಿಮ್ಮಯ್ಯ, ಪಂಚಮ್ ತಿಮ್ಮಯ್ಯ, ಮುಕ್ಕಾಟಿರ ವಿನಯ್, ರತ್ನಾ ಚರಮಣ, ಮಾದೆಯಂಡ ರೋಹನ್ ಇತರರಿದ್ದರು.