ಕಡೂರಿನಲ್ಲಿ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಉದ್ಘಾಟಿಸಿದರು. ಶಾಸಕ ಕೆ.ಎಸ್.ಆನಂದ್, ಶ್ರೇಯಸ್ ಪಟೇಲ್, ಸಂದೀಪ್, ಶಿವಾನಂದಸ್ವಾಮಿ ಭಂಡಾರಿ ಶ್ರೀನಿವಾಸ್, ಸಂದೀಪ್, ಎನ್.ರಮೇಶ್, ಶರತ್ ಕಷ್ಣಮೂರ್ತಿ ಇತರರಿದ್ದರು.  
ಜಿಲ್ಲೆ

ಯೋಜನೆಗಳನ್ನು ಜನರಿಗೆ ತಲುಪಿಸಿ

ಎಸ್.ಎನ್.ರವೀಂದ್ರ

ಕಡೂರು: ಕಾರ್ಯಕರ್ತರಿಗೆ ಬಲ ತುಂಬುವ ಉದ್ದೇಶದಿಂದ ಪಕ್ಷವನ್ನು ಮತ್ತಷ್ಟು ಸಂಘಟನೆಗೊಳಿಸಲು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜತೆ ಜನತೆಗೆ ಸರ್ಕಾರದ ಕಾರ್ಯಗಳನ್ನು ಕಾರ್ಯಕರ್ತರು ತಲುಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ಮಚ್ಚೇರಿ ಬೆಂಕಿಲಕ್ಷತ್ಮಯ್ಯ ಸಭಾಂಗಣದಲ್ಲಿ ಮಂಗಳವಾರ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್‌ನಲ್ಲಿ ಯಾವುದೇ ಜಾತಿ ಇಲ್ಲ. ಪಕ್ಷದ ಕಾರ್ಯಕರ್ತರೇ ಆಸ್ತಿಯಾಗಿದ್ದು, ಬ್ರಿಟಿಷರ ವಿರುದ್ಧ ಹೋರಾಡಲು ಸ್ಥಾಪನೆಗೊಂಡ ಕಾಂಗ್ರೆಸ್ ಮಹತ್ತರ ಕೊಡುಗೆ ನೀಡಿದೆ. ಇಂದಿರಾಗಾಂಧಿ ಕಾಲಘಟ್ಟದಲ್ಲಿ ಬಡಜನತೆಗಾಗಿ ರೂಪಿಸಿದ ಹಲವಾರು ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ಇಂದಿಗೂ ಜನತೆ ಸ್ಮರಿಸುತ್ತಾರೆ. ಈ ನಿಟ್ಟಿನಲ್ಲಿ ಜನರ ತೆರಿಗೆ ಹಣವನ್ನು ಜನರಿಗೇ ಕೊಡುವ ಮೂಲಕ ಆರ್ಥಿಕ ಚೇತನ ನೀಡುವ ಉದ್ದೇಶದಿಂದಲೇ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನವನ್ನು ಸಿದ್ದರಾಮಯ್ಯ ಸರ್ಕಾರ ಜಾರಿಗೊಳಿಸಿದೆ ಎಂದರು.

ಐದು ಗ್ಯಾರಂಟಿ ಯೋಜನೆಗಳು ಜಾತ್ಯಾತೀತವಾಗಿ ರಾಜ್ಯದ ಜನತೆಗೆ ತಲುಪಿವೆ. ವಿಪಕ್ಷಗಳಿಗೆ ಇದು ನುಂಗಲಾರದ ತುತ್ತಾಗಿದೆ. ಕಾಂಗ್ರೆಸ್‌ನಿಂದ ಐದು ಶಾಸಕರನ್ನು ಆರಿಸಿದ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿಯೂ ರಾಜ್ಯದಲ್ಲಿ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದೆ. ಕಾರ್ಯಕರ್ತರು ಪಕ್ಷದ ಮತ್ತು ಸರ್ಕಾರದ ಸಾಧನೆಗಳನ್ನು ಜನತೆಗೆ ತಲುಪಿಸಬೇಕು ಎಂದು ಹೇಳಿದರು.

ಕಾಂಗ್ರೆಸ್ ಸ್ವಾತಂತ್ರತ್ಯ ಹೋರಾಟಗಾರರ ಪಕ್ಷವಾಗಿದೆ. ಇತರ ಪಕ್ಷಗಳಿಗೆ ಹೇಳಿಕೊಳ್ಳಲೂ ಸ್ವಾತಂತ್ರ್ಯ ಹೋರಾಟಗಾರರಿಲ್ಲ. ಸರ್ದಾರ್ ವಲ್ಲಭಭಾಯಿ ಪಟೇಲರ ಪ್ರತಿಮೆ ನಿರ್ಮಿಸಿಕೊಂಡು ಹೋಗುವ ಪರಿಸ್ಥಿತಿ ಆ ಪಕ್ಷಗಳದ್ದಾಗಿದೆ. ರಾಜ್ಯದ ಗ್ಯಾರಂಟಿ ಯೋಜನೆಗಳನ್ನೇ ವಿಪಕ್ಷಗಳು ಅನುಸರಿಸುತ್ತಿವೆ. ಜನರಿಂದ ಆಯ್ಕೆಯಾದ ಪಕ್ಷ ಯಾವುದೇ ಇರಲಿ ಪ್ರಜಾಪ್ರಭುತ್ವದಲ್ಲಿ ರಾಷ್ಟ್ರದ ಏಳಿಗೆಯ ದಷ್ಟಿಯನ್ನಿಟ್ಟುಕೊಂಡು ಆಡಳಿತ ನಡೆಸಬೇಕು. ಧರ್ಮಗಳ ನಡುವೆ ದ್ವೇಷ ಬಿತ್ತುವ ಕಾರ್ಯವಾಗಬಾರದು ಎಂದರು.

ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಪಂಚ ಗ್ಯಾರಂಟಿಗಳಿಂದ ರಾಜ್ಯದ ಅಭಿವದ್ಧಿ ಮೊಟಕಾಗುತ್ತದೆ ಎಂಬ ವಿಪಕ್ಷಗಳ ಟೀಕೆಯನ್ನು ಸುಳ್ಳಾಗಿಸಿದ ಸಿದ್ದರಾಮಯ್ಯ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಇದೇ ಯೋಜನೆಗಳನ್ನು ಟೀಕಿಸಿದವರು ಅದನ್ನೇ ಅನುಕರಿಸುತ್ತಿದ್ದಾರೆ. ಸಿದ್ದರಾಮಯ್ಯ ರಾಜ್ಯದ ಅಭಿವದ್ಧಿಯನ್ನು ಕಡೆಗಣಿಸದೆ ಇತರ ರಾಜ್ಯಗಳಿಗೂ ಮಾದರಿಯಾಗಿದ್ದಾರೆ. ವಿರೋಧಿಗಳ ಟೀಕೆ ಏನೇ ಇರಲಿ ಕಾರ್ಯಕರ್ತರು ಪಕ್ಷ ಸಂಘಟನೆಯತ್ತ ಗಮನ ಹರಿಸಬೇಕು. ಕ್ಷೇತ್ರದಲ್ಲಿ ರಸ್ತೆಗಳನ್ನು ಅಭಿವದ್ಧಿಪಡಿಸುವ ಹಾಗೂ ಬಹುಮುಖ್ಯವಾಗಿ ಉದ್ಯೋಗಕ್ಕಾಗಿ ಜವಳಿಪಾರ್ಕ್ ಸ್ಥಾಪನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ಹೇಳಿದರು.

ಭದ್ರಾ-ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಎಂ.ಸಿ.ಶಿವಾನಂದ ಸ್ವಾಮಿ, ಆಸಂದಿ ಕಲ್ಲೇಶ್, ಭಂಡಾರಿ ಶ್ರೀನಿವಾಸ್, ಎನ್.ರಮೇಶ್, ಬಿ.ಎಂ.ಸಂದೀಪ್, ಬಾಸೂರು ಚಂದ್ರಮೌಳಿ, ನಿಕೇತ್ ರಾಜ್ ಮೌರ್ಯ, ಶರತ್ ಕಷ್ಣ್ಣಮೂರ್ತಿ, ಹೋಚಿಹಳ್ಳಿ ಭೋಗಪ್ಪ, ವಿ.ಜಯಾರಾಂ, ಗುಮ್ಮನಹಳ್ಳಿ ಅಶೋಕ್, ತೋಟದಮನೆ ಮೋಹನ್‌ಕುಮಾರ್, ಕೆ.ಜಿ.ಶ್ರೀನಿವಾಸಮೂರ್ತಿ, ರೇಣುಕಾರಾಧ್ಯ, ದೊಣ್ಣೆಕೋರನಹಳ್ಳಿ ಉಮೇಶ್ ಇತರರಿದ್ದರು.