ಬಾಗಲಕೋಟೆ: ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಅಡಿಯಲ್ಲಿ ಅರ್ಹ ಫಲಾನುಭವಿಗಳೆಂದು ಗುರುತಿಸಿಕೊಂಡು ಕೃಷಿ ಮತ್ತು ಇನ್ನಿತರ ಇಲಾಖೆಗಳಿಂದ ಕೃಷಿ ಸಲಕರಣೆ, ಟ್ರ‍್ಯಾಕ್ಟರ್, ಯಂತ್ರೋಪಕರಣಗಳನ್ನು ಪಡೆದು ನಂತರದಲ್ಲಿ ಅವುಗಳನ್ನು ಮಾರಾಟ ಮಾಡಿದಲ್ಲಿ ಮಾರಾಟಕ್ಕೆ ತೆಗೆದುಕೊಂಡವರ ಮತ್ತು ಮಾರಾಟ ಮಾಡಿದವರ ಇಬ್ಬರ ಮೇಲೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಽಕಾರಿ ಜಾನಕಿ ಕೆ.ಎಂ. ಹೇಳಿದರು.
ಜಿಲ್ಲಾಽಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರದಿಂದ ಪಡೆದಂತಹ ಉಪಕರಣ, ಯಂತ್ರೋಪಕರಣಗಳನ್ನು ಅಥವಾ ಇನ್ಯಾವುದೇ ಸೌಲಭ್ಯವನ್ನಾದರೂ ಸರಿ, ಅವುಗಳನ್ನು ಫಲಾನುಭವಿಗಳೇ ಉಪಯೋಗಿಸಿಕೊಳ್ಳಬೇಕು ಹೊರತು ಮಾರಾಟ ಮಾಡುವುದಾಗಲಿ ಅಥವಾ ವರ್ಗಾಸುವ ಕಾರ್ಯವಾಗಬಾರದು. ಈ ಹಿನ್ನಲೆಯಲ್ಲಿ ಆಯಾ ತಾಲೂಕಿನ ಸಮಾಜ ಕಲ್ಯಾಣಾಽಕಾರಿ ಸೌಲಭ್ಯಗಳನ್ನು ಪಡೆದ ಫಲಾನುಭವಿಗಳ ಮನೆಗೆ ಭೇಟಿ ನೀಡಿ ಯೋಜನೆಯಡಿ ಪಡೆದ ಸಲಕರಣೆಗಳು ಮತ್ತು ಯಂತ್ರೋಪಕರಣಗಳು ಸದ್ಬಳಕೆಯಾಗುತ್ತಿವೆಯಾ? ಆರ್ಥಿಕವಾಗಿ ಸಬಲರಾಗಿರುವವರ ಪಾಲಾಗಿವೆಯಾ ಎಂಬುದನ್ನು ಖಚಿತ ಪಡೆಸಿಕೊಳ್ಳಬೇಕು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸದಾಶಿವ ಬಡಿಗೇರ ಮಾತನಾಡಿ, ಕಳೆದ ಬಾರಿಯ ಸಭೆಯಲ್ಲಿ ಜಿಲ್ಲಾಽಕಾರಿಗಳು ಸೂಚಿಸಿದಂತೆ ಪ್ರತಿ ತಾಲೂಕಿನಲ್ಲಿ ತಾಲೂಕು ಮಟ್ಟದ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಸಭೆಯನ್ನು ಕಡ್ಡಾಯವಾಗಿ ಜರುಗಿಸುವಂತೆ ಆಯಾ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಗೆ ಹೇಳಲಾಗಿ, ಎಲ್ಲಾ ತಾಲೂಕುಗಳಲ್ಲಿ ಸಭೆಯನ್ನು ನಡೆಸಲಾಗಿರುತ್ತದೆ.
೨೦೨೪-೨೫ ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿ ಎಸ್ ಪಿ) ಗಿರಿಜನ ಉಪಯೋಜನೆ (ಟಿಎಸ್‌ಪಿ) ಯಡಿ ೨೦೨೪ ರ ಏಪ್ರಿಲ್ ೧ ರಿಂದ ೨೦೨೫ ರ ಮಾರ್ಚ ೩೧ ರವರಗೆ ಕೃಷಿ ಇಲಾಖೆಯಲ್ಲಿ ಎಸ್‌ಸಿ ಎಸ್‌ಪಿ ಅಡಿಯಲ್ಲಿ ಶೇ.೬೭.೩೨ ರಷ್ಟು ಮತ್ತು ಟಿಎಸ್‌ಪಿ ಅಡಿಯಲ್ಲಿ ಶೇ.೭೯.೨೨ ರಷ್ಟು, ತೋಟಗಾರಿಕೆ ಇಲಾಖೆಯಲ್ಲಿ ಶೇ.೬೦.೮೩ ಹಾಗೂ ಶೇ.೬೨.೮೯, ರೇಷ್ಮೆ ಇಲಾಖೆಯಲ್ಲಿ ಶೇ.೯೬.೪೩ ಹಾಗೂ ಶೇ.೧೦೦ ರಷ್ಟು ಭೌತಿಕ ಪ್ರಗತಿ ಸಾಽಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಽಕಾರಿ ಪಿ. ರುಟ್ರುನ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಽಕಾರಿಗಳು ಉಪಸ್ಥಿತರಿದ್ದರು.