ಜಿಲ್ಲೆ

ಯೋಜನೆ ತಲುಪಿಸುವಲ್ಲಿ ಮಾಧ್ಯಮ ಪಾತ್ರ ಹಿರಿದು

ಸಂತೋಷ ದೇಶಪಾಂಡೆ

ಬಾಗಲಕೋಟೆ: ರಾಷ್ಟಿçÃಯ ಆರೋಗ್ಯ ಅಭಿಯಾನ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ಮಾಧ್ಯಮ ವರ್ಗದವರ ಪಾತ್ರ ಸಹ ಮಹತ್ವವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಽಕಾರಿ ಡಾ.ಮಂಜುನಾಥ ಹೇಳಿದರು.

ನಗರದ ಪ್ರೇಸ್‌ಕ್ಲಬ್‌ನಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಐಇಸಿ ವಿಭಾಗ ಸಹಯೋಗದಲ್ಲಿ ರಾಷ್ಟಿçÃಯ ಆರೋಗ್ಯ ಅಭಿಯಾನ ಯೋಜನೆಗಳ ಕುರಿತು ಮಾಧ್ಯಮದವರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಆರೋಗ್ಯ ಇಲಾಖೆಯ ಕಾರ್ಯಕ್ರಮಗಳನ್ನು ಐಇಸಿ ಚಟುವಟಿಕೆಗಳ ಮೂಲಕ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಅನುಷ್ಠಾನದಲ್ಲಿ ಮಾಧ್ಯಮಗಳ ಪಾತ್ರ ಮಹತ್ವವಾಗಿದ್ದು, ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಆರೋಗ್ಯ ಇಲಾಖೆಯಲ್ಲಿ ಸಾಕಷ್ಟು ಯೋಜನೆಗಳು ಇದ್ದು, ಇನ್ನು ಹೊಸ ಹೊಸ ಯೋಜನೆಗಳು ಸೇರ್ಪಡೆಯಾಗುತ್ತಿವೆ. ಆರೋಗ್ಯ ವಿಮೆ, ಎಬಿಆರ್‌ಕೆ ಹಾಗೂ ಆಯುಷ್ಮಾನ ಕಾರ್ಡದಂತಹ ಯೋಜನೆಗಳನ್ನು ಜಾರಿಗೆ ತಂದಿರುವುದು ಪ್ರಪಂಚದಲ್ಲಿಯೇ ಏಕೈಕ ದೇಶ ಭಾರತ. ಈ ಯೋಜನೆಯಡಿ ಪ್ರತಿ ಕಾರ್ಡ್ಗೆ ೫ ಲಕ್ಷ ರೂ. ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಂತಹ ಅನಿರೀಕ್ಷಿತ ಘಟನೆಗಳು ಉಂಟಾದಾಗ ಈ ಯೋಜನೆ ಅನುಕೂಲವಾಗಲಿದೆ. ಸರ್ಕಾರ ಆರೋಗ್ಯ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಿಳಿಸಿ ಅದರ ಸದುಪಯೋಗ ಪಡೆದುಕೊಳ್ಳುವಂತೆ ಮಾಡುವ ಉದ್ದೇಶ ಹೊಂದಿದೆ ಎಂದು ಹೇಳಿದರು.

ಹೃದಯ ಸಂಬAಽತ ಕಾಯಿಲೆಗಳಿಗೆ ಬಾಗಲಕೋಟೆ ಜಿಲ್ಲಾ ಆಸ್ಪತ್ರೆ, ಹುನಗುಂದ ಮತ್ತು ಮುಧೋಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದೆ. ಈ ವಿಭಾಗದಲ್ಲಿ ಚಿಕತ್ಸೆ ವಯಸ್ಸಿಗೆ ಅನುಗುಣವಾಗಿ ನೀಡಲಾಗುತ್ತದೆ. ಅಲ್ಲದೇ ಹೃದಯಾಘಾತ ಸಂಭವಿಸಿದಾಗ ಒಂದು ಗಂಟೆಯೊಳಗೆ ದುಬಾರಿ ಇಂಜೆಕ್ಷನ್ ನೀಡುವ ಸೌಲಭ್ಯ ಕೂಡಾ ಇದೆ. ಇದರ ಜೊತೆಗೆ ಜೀವಿತಾವಽ ಮುನ್ನ ಸಾವಾಗುವಂತದ್ದು, ಬೇರೆ ಬೇರೆ ರೋಗಗಳು ಮತ್ತು ಅಂಗವಿಕಲತೆ ತಡೆಗಟ್ಟುವ ಕೆಲಸ ಮಾಡಲಾಗುತ್ತಿದೆ ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಽಕಾರಿ ನಾಗವೇಣಿ ತಾಯಿ ಮತ್ತು ಮಗುವಿನ ಆರೋಗ್ಯ, ಡಾ.ಅಜಿತ ಅಸಾಂಕ್ರಾಮಿಕ ರೋಗಗಳಾದ ಕ್ಯಾನ್ಸರ್, ಹೃದಯ ಸಂಬAಽತ ಕಾಯಿಲೆ, ಬಿಪಿ, ಶುರ‍್ಸ್ ಕಾಯಿಲೆ ಕುರಿತು ಹಾಗೂ ಹಿರಿಯ ಪ್ರಯೋಗ ಶಾಲಾ ತಂತ್ರಜ್ಞ ಅಽಕಾರಿ ಅಶೋಕ ನೀಲವಾಣಿ ಕೀಟಜನ್ಯದಿಂದ ಸಂಭವಿಸುವ ರೋಗಗಳ ಬಗ್ಗೆ ಉಪನ್ಯಾಸ ನೀಡಿದರು.

ಕಾನಿಪ ಜಿಲ್ಲಾಧ್ಯಕ್ಷ ಆನಂದ ಧಲಬಂಜನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಕಸ್ತೂರಿ ಪಾಟೀಲ, ಕಾರ್ಯಕ್ರಮ ಅಽಕಾರಿ ಶಿವನಗೌಡ ಪಾಟೀಲ, ಜಿಲ್ಲಾ ಸಮೀಕ್ಷಣಾಽಕಾರಿ ಡಾ.ದಯಾನಂದ ಕರೇನ್ನವರ, ಜಿಲ್ಲಾ ಆರೋಗ್ಯ ಶಿಕ್ಷಣಾಽಕಾರಿ ಶಶಿಕಲಾ ಶಿನ್ನೂರ, ಆರೋಗ್ಯ ಇಲಾಖೆಯ ಶಶಿಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.