ಗೋಕಾಕನ ರೋಟರಿ ರಕ್ತಭಂಡಾರದ ಆವರಣದಲ್ಲಿ ನೂತನ ರಕ್ತ ಸಂಗ್ರಹಣಾ ವಾಹನಕ್ಕೆ ಗಣ್ಯರು ಚಾಲನೆ ನೀಡಿದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದೆ ಮಂಗಲ ಅಂಗಡಿ, ಮಲ್ಲಯ್ಯ ಸ್ವಾಮೀಜಿ ಇತರರಿದ್ದರು. 
ಜಿಲ್ಲೆ

ಯೋಜನೆ ಜಾರಿಗೆ ಜನರ ಸಹಕಾರ ಮುಖ್ಯ

ಗೋಕಾಕ: ಅನ್ನ, ಆರೋಗ್ಯ, ಆಶ್ರಯ, ಶಿಕ್ಷಣ ಒದಗಿಸುವುದು ಸರ್ಕಾರದ ಕರ್ತವ್ಯ. ಆದರೆ, ಇದನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಸಾರ್ವಜನಿಕರ ಪಾತ್ರ ಮುಖ್ಯವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಇಲ್ಲಿನ ಯೋಗಿಕೊಳ್ಳ ರಸ್ತೆಯಲ್ಲಿರುವ ರೋಟರಿ ರಕ್ತಭಂಡಾರ ಆವರಣದಲ್ಲಿ ರಕ್ತ ಸಂಗ್ರಹಣಾ ವಾಹನ ಹಾಗೂ ಉಪಕರಣಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಸದೆ ಮಂಗಲ ಅಂಗಡಿ ಮಾತನಾಡಿ, ಗೋಕಾಕದ ರೋಟರಿ ರಕ್ತಭಂಡಾರಕ್ಕೆ ಅನೇಕ ಮಹನೀಯರ ಆಶೀರ್ವಾದವಿದೆ. ರಕ್ತದಾನ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಿದೆ ಎಂದರು. ಕ್ಯಾನ್ಸರ್‌ನಿಂದ ಬದುಕಿಬಂದ ಸಾಮಾಜಿಕ ಕಾರ್ಯಕರ್ತ ಪ್ರವೀಣ ಶಹಾ ಅವರು ಗೋಕಾಕ ರೋಟರಿ ಕಾರ್ಯ ಮೆಚ್ಚಿ ರೋಟರಿ ರಕ್ತ ಭಂಡಾರಕ್ಕೆ ಐದು ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಿಸಿದರು.

ಘೋಡಗೇರಿ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರೋಟೇರಿಯನ್ ನಾಸಿರ್ ಬೋರ್ಸದವಾಲಾನ, ಮಲ್ಲಿಕಾರ್ಜುನ ಈಟಿ, ಸೋಮಶೇಖರ ಮಗದುಮ್, ಮಲ್ಲಿಕಾರ್ಜುನ ಕಲ್ಲೋಳ್ಳಿ, ವಿದ್ಯಾ ಗುಲ್ಲ, ಮಾಜಿ ಶಾಸಕ ಎಂ.ಎಲ್.ಮುತ್ತೆನ್ನವರ, ಚಂದ್ರಶೇಖರ ಕೊಣ್ಣುರ, ಬಸವರಾಜ ಹುಳ್ಳೇರ, ಪ್ರಸಾದ ಸೋಲ್ಲಾಪುರಮಠ, ಮಹಾಂತೇಶ ತಾಂವಶಿ, ಡಾ.ಕಪ್ಪಲಗುದ್ದಿ, ಡಾ.ಕಮತ, ಶ್ರೀದೇವಿ ತಡಕೋಡ, ಸತೀಶ ಬೆಳಗಾವಿ ಇತರರಿದ್ದರು.