ಜಿಲ್ಲೆ

ಯೋಜನಾ ನಿರ್ವಹಣೆಗೆ ಮಾಹಿತಿ ಅಗತ್ಯ

ಚಿತ್ರದುರ್ಗ: ತಾಯಿ ಮತ್ತು ಮಕ್ಕಳ ವಿವಿಧ ಆರೋಗ್ಯ ಸೇವೆಗಳ ಗಣಕೀಕೃತ ಮಾಹಿತಿ ಯೋಜನಾ ನಿರ್ವಹಣೆಗೆ ಅಗತ್ಯವಾಗಿದೆ ಎಂದು ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್ ಹೇಳಿದರು.

ಜಿಲ್ಲಾಸ್ಪತ್ರೆಯ ಬಿ.ಸಿ.ರಾಯ್ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಗೆ ಹೆಲ್ತ್ ಇನ್ಫಾರ್ಮೇಶನ್ ಮ್ಯಾನೇಜ್‌ಮೆಂಟ್ ಸಿಸ್ಟಮ್, ಯೂವಿನ್ ಪೋರ್ಟಲ್, ಆರ್‌ಸಿಎಚ್ ಪೋರ್ಟಲ್ ಉಪಯುಕ್ತತೆ, ದಾಖಲಾತಿ ಗಣಕೀಕರಣ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಇಲಾಖೆಯ ಉಪಕೇಂದ್ರ, ಪಿಎಚ್‌ಸಿ, ಸಿಎಚ್‌ಸಿ, ತಾಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆಯ ವಿವಿಧ ಸೇವೆಗಳನ್ನು ಗಣಕೀಕರಣಗೊಳಿಸಿ ದತ್ತಾಂಶಗಳ ಮಾಹಿತಿ ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ. ಈಗ ಖಾಸಗಿ ಆಸ್ಪತ್ರೆಗಳು ಕೂಡ ಮಾಹಿತಿ ನೀಡಬೇಕಿದ್ದು, ಅದಕ್ಕಾಗಿ ತರಬೇತಿ ನೀಡಲಾಗುತ್ತಿದೆ ಎಂದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅಭಿನವ, ಡಾ.ತೋಯಿಜಾಕ್ಷಿ ಬಾಯಿ, ಡಾ.ರವಿಕುಮಾರ್, ಜಿಲ್ಲಾ ಎಂಐಎಸ್ ವ್ಯವಸ್ಥಾಪಕ ಕುಮಾರ್, ಯೂವಿನ್ ಪೋರ್ಟಲ್ ವ್ಯವಸ್ಥಾಪಕ ವೀರೇಶ್ ಕರಕಪ್ಪ ಮೇಟಿ, ನಗರ ವ್ಯವಸ್ಥಾಪಕ ಅರ್ಜುನ್ ಇತರರಿದ್ದರು.