ಚಿತ್ರದುರ್ಗ: ಪೊಲೀಸರಿಗೆ ಕರ್ತವ್ಯದ ಒತ್ತಡ ಸಹಜ,ಅದೇ ನೆಪದಲ್ಲಿ ಆರೋಗ್ಯದೆಡೆ ನಿರ್ಲಕ್ಷೃ ಸಲ್ಲದೆಂದು ಎಸ್‌ಪಿ ಕೆ.ಪರಶುರಾಮ ಪೊಲೀಸ್ ಅಧಿಕಾರಿ,ಸಿಬ್ಬಂದಿಗೆ ಸಲಹೆ ನೀಡಿದರು.
ನಗರದ ಡಿಎಆರ್ ಮೈದಾನದಲ್ಲಿ ಬುಧವಾರ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು,ಪೊಲೀ ಸರು ಎಂದ ಮೇಲೆ ಡ್ಯೂಟಿಯ ಒತ್ತಡ ,ರಾತ್ರಿ ಪಾಳಿ ಇತ್ಯಾದಿ ಎಲ್ಲವೂ ಇರುತ್ತದೆ. ಟೈಮ್ ಎಲ್ಲಿದೆ ಎನ್ನದೇ ಸೃದೃಢ ಕಾಯ,ಉತ್ತಮ ಆ ರೋಗ್ಯಕ್ಕಾಗಿ ಆಟೋಟ,ನಡಿಗೆ,ಯೋಗಾಭ್ಯಾಸ ಮುಂತಾದುವುಗಳನ್ನು ರೂಢಿಸಿಕೊಳ್ಳ ಬೇಕೆಂದರು.
ಯೋಗ ಗುರು ಚಿನ್ಮಯಾನಂದ ಅವರ ನೇತೃತ್ವದಲ್ಲಿ ಅಧಿಕಾರಿ,ಸಿಬ್ಬಂದಿ ಯೋಗ ಪ್ರದರ್ಶನ ನೀಡಿದರು. ಚಿನ್ಮಯಾನಂದ ಹಾಗೂ ಯೋಗ ಶಿಕ್ಷಕಿ ಬಿಂದು ಅವರನ್ನು ಎಸ್ ಪಿ ಸನ್ಮಾನಿಸಿದರು. ಡಿಎಆರ್ ಡಿವೈಎಸ್‌ಪಿ ಎಸ್.ಗಣೇಶ್,ಬಾಲಚಂದ್ರನಾಯಕ್,ನಯೀಂ ಅಹ ಮದ್,ಮೋಹನ್ ಮತ್ತಿತರ ಪೊಲೀಸ್ ಅಧಿಕಾರಿಗಳು ಇದ್ದರು.