ಜಿಲ್ಲೆ

ಯೋಗಪಟುಗಳು ರಾಷ್ಟçಮಟ್ಟಕ್ಕೆ ಆಯ್ಕೆ

Dharwad

ಧಾರವಾಡ: ಯೋಗ ಫೆಡರೇಶನ್ ಆಫ್ ಪಂಚಕುಲ (ಹರಿಯಾಣ) ಹಾಗೂ ಕರ್ನಾಟಕ ಹವ್ಯಾಸಿ ಯೋಗ ಸ್ಪೋರ್ಟ್ಸ್ ಅಸೋಷಿಯೇಶನ್‌ನಿಂದ ಇತ್ತೀಚೆಗೆ ಕಡೂರಿನಲ್ಲಿ ಏರ್ಪಡಿಸಿದ್ದ ೪೭ನೇ ರಾಜ್ಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಧಾರವಾಡ ಜಿಲ್ಲೆಯ ವಿವಿಧ ಶಾಲೆಗಳಿಂದ ಭಾಗಿಯಾಗಿದ್ದ ವಿದ್ಯಾರ್ಥಿಗಳು ಪಂಚಾಬ್‌ನಲ್ಲಿ ನಡೆಯುವ ೪೭ನೇ ರಾಷ್ಟçಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಕಿರಿಯರ ವಿಭಾಗದಲ್ಲಿ ಭೂಮಿ ವಿರಕ್ತಮಠ (ಪ್ರಥಮ), ಹೇಮಾವತಿ ಬಳಿಗಾರ (ಪ್ರಥಮ), ಸಾನ್ವಿ ತಟ್ಟಿನ (ದ್ವಿತೀಯ), ವರುಣ್ ಕುರಹಟ್ಟಿ (ಪ್ರಥಮ), ಕಿರಣಕುಮಾರ್ ಎಂ. (ದ್ವಿತೀಯ), ರತ್ನಾ ಶ್ಯಾಗೋಟಿ (ಪ್ರಥಮ), ಶಿವಾನಂದ ಕೆ. (ಪ್ರಥಮ), ಶ್ರೇಯಾ ಜಿ. ದ್ವಿತೀಯ ಸ್ಥಾನ ಪಡೆದು ರಾಷ್ಟç ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇನ್ನು ಹಿರಿಯ ಯೋಗ ಪಟುಗಳ ವಿಭಾಗದಲ್ಲಿ ಪ್ರಜ್ಞಾ ಪಿಸೆ (ದ್ವಿತೀಯ), ಬೀಸಪ್ಪ (ದ್ವಿತೀಯ), ಈರಮ್ಮ (ದ್ವಿತೀಯ), ವಿನಾಯಕ ಕೊಂಗಿ (ಪ್ರಥಮ), ಲತಾ ಎಸ್. (ಪ್ರಥಮ) ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಿರಿಯ ಯೋಗಪಟುಗಳ ಪೈಕಿ ಧಾರವಾಡದ ಸಂಜೀವಕುಮಾರ್ ಹಡಗಲಿ ಚಿನ್ನದ ಪದಕ ಪಡೆದಿದ್ದಾರೆ.
ಸಾಧಕ ವಿದ್ಯಾರ್ಥಿಗಳಿಗೆ ಯೋಗ ಸ್ಟೋರ್ಟ್ಸ್ ಅಸೋಷಿಯೇಶನ್ ಅಧ್ಯಕ್ಷ ಸಂಜೀವಕುಮಾರ್ ಹಡಗಲಿ, ಹಿರಿಯ ಯೋಗಪಟು ಶಿವು ಬಾರಕೇರ ತರಬೇತಿ ನೀಡಿದ್ದಾರೆ.