ಶಹಾಬಾದ್: ಮಾನ್ಯ ಪ್ರಧಾನ ಮಂತ್ರಿ ಮೋದಿಯವರು ಒಂದು ದಿನ ಕೂಡಾ ರಜೆ ಹಾಕದೆ ಆರೋಗ್ಯರಾಗಿರಲು ಮುಖ್ಯ ಕಾರಣ ಯೋಗ, ಆದ್ದರಿಂದ ನಾವೆಲ್ಲರು ಯೋಗವನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸುಂದರ ಬದುಕು ಕಟ್ಟಿಕೊಳ್ಳಬಹುದು ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಹೇಳಿದರು.
ಅವರು ವಾಡಿಯ ಎಸಿಸಿಜೋಗರ್ಸ ಪಾರ್ಕ್ನಲ್ಲಿ ಪತಂಜಲಿ ಯೋಗ ಸಮಿತಿ ಹಾಗೂ ವಾಯು ವಿಹಾರ ಬಳಗದಿಂದ ಆಯೋಜಿಸಿದ ಅಂತಾರಾಷ್ಟ್ರೀಯ ಯೋಗದಿನದ ಕಾರ್ಯಕ್ರಮವನ್ನು ಮಾಸ್ಕ್ ವಿತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಈಗ ನಮ್ಮೆಲ್ಲರಿಗೂ ಕಾಡುತ್ತಿರುವ ಈ ಕರೊನಾ ವೈರಸ್ನಿಂದ ಕಾಪಾಡಲು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಪರಸ್ಪರ ಅಂತರ ಕಾಯ್ದುಕೊಂಡು ಹೋಗಬೇಕು ಎಂದು ಹೇಳಿದರು. ನಾನು ಕೂಡ ದಿನ ನಿತ್ಯ ಯೋಗವನ್ನು ಮಾಡುತ್ತೇನೆ ಇದರಿಂದ ನಾವು ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಸಾಧ್ಯವಿದೆ ಎಂದು ಹೇಳಿದರು.
ಪತಂಜಲಿ ಯೋಗ ಭಾರತ ಸ್ವಾಭಿಮಾನ ಟ್ರಸ್ಟ್ ಜಿಲ್ಲಾಧ್ಯಕ್ಷ ಹಾಗೂ ಯೋಗ ಗುರು ಶಿವಾನಂದ ಸಾಲಿಮಠ ಮಾತನಾಡಿ,
ಪ್ರತಿಯೊಬ್ಬರು ರೋಗಮುಕ್ತ ಜೀವನ ನಡೆಸಲು ದಿನನಿತ್ಯ ಯೋಗ ಮಾಡಿದರೆ ನಮ್ಮಲ್ಲಿರುವಂತ ಅನೇಕ ರೋಗಗಳು ದೂರಾಗಿ ನಮ್ಮ ಶರೀರ ಸದೃಢ, ಸಶಕ್ತ ಮತ್ತು ಆರೋಗ್ಯವಾಗಿರಲಿಕ್ಕೆ ಸಾಧ್ಯವಾಗುತ್ತದೆ ಎಂದು
ನಮ್ಮ ಜೀವನ ಶೈಲಿ ಆಧುನಿಕತೆಗೆ ಬದಲಾಗುತ್ತಿರುವುದೇ ನಮ್ಮ ಆರೋಗ್ಯ ಕ್ಷೀಣಿಸುತ್ತಿರುವುದು. ನಾವು ಬ್ರಹ್ಮಿಮೂಹರ್ತದಲ್ಲಿ ಏಳುವುದು, ಯೋಗ, ಪ್ರಾಣಾಯಾಮದಿಂದ ಬರೀ ಶರೀರವಷ್ಟೆ ಅಲ್ಲದೇ ಮಾನಸಿಕವಾಗಿಯೂ ಕೂಡಾ ಸದೃಢವಾಗುತ್ತೇವೆ ಎಂದರು. ಈ ಭಾರಿ ಕರೊನಾ ವೈರಸ್ನಿಂದ ಸರಳ ರೀತಿಯಲ್ಲಿ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸುತ್ತಿದ್ದೇವೆ ಇಲ್ಲಿರುವ ನಿವೆಲ್ಲರೂ ಬೆಳಗ್ಗೆ ಒಂದು ತಾಸು ಯೋಗ ಮಾಡಿದರೆ ಜೀವನದೂದ್ದಕ್ಕೂ ರೋಗ ಮುಕ್ತಜೀವನ ಹಾಗೂ ಉಲ್ಲಾಸದಿಂದ ಕೂಡಿರುತ್ತದೆ ಎಂದು ಹೇಳಿದರು.
ಪತಂಜಲಿ ವಾಡಿ ಪ್ರಭಾರಿ ಹಾಗೂ ಯೋಗ ಶಿಕ್ಷಕರಾದ ವೀರಣ್ಣ ಯಾರಿ,ರಾಜೀವ್ ಪಾಂಡೆ ಅವರು ಯೋಗ ದಿನಾಚರಣೆಗೆ ಆಗಮಿಸಿದ ಅಥಿತಿಗಳಿಗೆ,ಯೋಗಾಸಕ್ತರಿಗೆ ಮಾಸ್ಕ್ ವಿತರಿಸಿದರು.
ಕಲಬುರಗಿ ಯೋಗ ಶಿಕ್ಷಕರಾದ ಘನಶಾಮ ಗುತ್ತೇದಾರ, ರಾಮಲಿಂಗ, ರೇಖಾ ಮಠಪತಿ, ಶ್ರದ್ಧಾ ಬಜಾಜ್, ಜಂಗಮ ಸಮಾಜದ ತಾಲೂಕ ಅಧ್ಯಕ್ಜ ನೀಲಯ್ಯ ಸ್ವಾಮಿ,ಬಸವರಾಜ ಪಂಚಾಳ, ಎಸಿಸಿ ಕಾರ್ಮಿಕ ಸಂಘಟನೆಯ ಉಪಾಧ್ಯಕ್ಷ ರಮೇಶ ಕಾರಬಾರಿ,ಸಂತೋಷ ಕುಲಕರ್ಣಿ , ವೀರಭದ್ರಪ್ಪ ಆರ.ಕೆ,ಭೀಮಶಾ ಜೀರೋಳ್ಳಿ,ಬಾಬು ಮೀಯಾ, ನಿವೇದಿತಾ ದಹಿಯಾಂಡೆ, ಅಶೋಕ ಪವಾರ ವಾಯು ವಿಹಾರ ಬಳಗದ ವಿ ಕೆ ಕೆದ್ಲಯ್ಯ, ಭೀಮರಾವ ದೋರಿ, ಮಡಿವಾಳಪ್ಪ ಹೇರೊರ್, ವಿಠಲ ನಾಯಕ, ಶಾಂತವೀರಪ್ಪ ಇಂಗಳಗಿ, ದೇವಿಂದ್ರ ಕರದಳ್ಳಿ, ಕಾಶಿನಾಥ ಅರಳಗುಂಡಗಿ, ವಿಠಲ ಜ್ಯೋಷಿ, ಬಸವರಾಜ ಕಿರಣಗಿ, ವಿಜಯ ಪವಾರ, ಲಕ್ಮೀಕಾಂತ ಬಿರೆದಾರ, ನಾಶಿರ್ ಹುಸೇನ್, ಮಲ್ಲಿಕಾರ್ಜುನ ಕರಗಾರ,ರಮೇಶ್ ಪವಾರ ಸೇರಿ ಇತರರು ಪಾಲ್ಗೊಂಡ ಯೋಗಾಭ್ಯಾಸದಲ್ಲಿ ತೊಡಗಿದರು.
*ಈ ಸಲ ಕೋವಿಡ್ 19 ಕಾರಣದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ನಿರ್ಬಂಧಿತ ಸಂಖ್ಯೆಯ (50) ಯೋಗಾಸಕ್ತರಿಗೆ ಮಾತ್ರ ಅವಕಾಶವಿತ್ತು
*ಯೋಗಾಸಕ್ತರು ಹೆಸರು ಮೊದಲೆ ನೋಂದಯಿಸಿ ಮಾಸ್ಕ, ಶಾಲು, ಟಾವೆಲ್ಲ,ನೀರಿನ ಬಾಟಲ್ , ಸಾನಿಟೈಜರ್ ಮುಂಜಾಗ್ರತಾ ಕ್ರಮ ಗಳೊಂದಿಗೆ ಭಾಗವಹಿಸಿದ್ದರು
*ಪಾಲ್ಗೊಳ್ಳಲು ಆಗದೆ ಇರುವವರು ಸಾಮಾಜಿಕ ಜಾಲತಾಣದ ಮುಖಾಂತರ ಕಾರ್ಯಕ್ರಮದಲ್ಲಿ ತೊಡಗಿ ಮನೆಯಲ್ಲೇ ಇದ್ದು ಯೋಗಾಭ್ಯಾಸದಲ್ಲಿ ನಿರತರಾಗಿದ್ದು ವಿಶೇಷ ವಾಗಿತ್ತು