ಕಲಬುರಗಿ: ನಿತ್ಯ ಯೋಗ ಮಾಡುವುದರಿಂದ ರೋಗ ಮುಕ್ತಿಯಾಗಿ ಮನುಷ್ಯನ ಆರೋಗ್ಯ ವೃದ್ಧಿಯಾಗಲಿದೆ. ಮನುಷ್ಯನು ಸದಾ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಹೃದಯಾಘಾತ, ಮಧುಮೇಹದಂಥ ಅನೇಕ ಕಾಯಿಲೆಗಳು ಇಲ್ಲವಾಗಲಿವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್‌ಸಿAಗ್ ಮೀನಾ ಹೇಳಿದರು.
ಅಂತಾರಾಷ್ಟಿçÃಯ ಯೋಗ ದಿನಾಚಾರಣೆ ನಿಮಿತ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಆಯುಷ್ ಮಹಾವಿದ್ಯಾಲಯ ಮತ್ತು ವಿವಿಧ ಯೋಗ ಸಂಸ್ಥೆಗಳ ಸಹಯೋಗದಡಿ ಜಗತ್ ವೃತ್ತದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಯೋಗ ನಡಿಗೆ ಜಾಥಾಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.
ಶುಕ್ರವಾರ ಬೆಳಗ್ಗೆ ೬.೩೦ರಿಂದ ೮.೩೦ರವರೆಗೆ ೧೦ನೇ ಅಂತಾರಾಷ್ಟಿçÃಯ ಯೋಗ ದಿನ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು, ಕಾಲೇಜಿನ ಪ್ರಾಂಶುಪಾಲರು, ಸಂಘ-ಸAಸ್ಥೆಗಳ ಪ್ರತಿನಿಧಿಗಳು ಚಂದ್ರಶೇಖರ ಪಾಟೀಲ್ ಕ್ರೀಡಾಂಗಣಕ್ಕೆ ಬಂದು ಯೋಗಾಭ್ಯಾಸ ಮಾಡಬೇಕು. ತಮ್ಮ ತಮ್ಮ ಶಾಲಾ-ಕಾಲೇಜು, ವಿಶ್ವವಿದ್ಯಾಲಯ, ತಾಲೂಕು, ಗ್ರಾಮ ಪಂಚಾಯಿತಿಗಳಲ್ಲಿ ಯೋಗ ದಿನ ಆಚರಿಸಬೇಕು ಎಂದರು.
ಆಯುಷ್ ಅಧಿಕಾರಿ ಡಾ.ಗಿರೀಶ ಎಸ್.ಯು. ಮಾತನಾಡಿ, ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಅಳವಡಿಸಿಕೊಳ್ಳಬೇಕು. ಯೋಗ ಮಾಡುವುದರಿಂದ ದೈಹಿಕ, ಮಾನಸಿಕವಾಗಿ ಆರೋಗ್ಯವಂತರಾಗಿರಲು ಸಾಧ್ಯ ಎಂದು ಪ್ರತಿಪಾದಿಸಿದರು.
ಜಗತ್‌ನಿಂದ ಶುರುವಾದ ಜಾಥಾ ಸರ್ದಾರ್ ವಲಭಭಾಯಿ ಪಟೇಲ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಜಾಥಾ ಸಂಪನ್ನಗೊAಡಿತು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರತಿಕಾಂತ ಸ್ವಾಮಿ, ಯೋಗ ಗುರು ಶಿವಾನಂದ ಸಾಲಿಮಠ, ಪಿಯು ಡಿಡಿ ಶಿವಶರಣಪ್ಪ ಮುಳೆಗಾಂವ, ಹೋಮಿಯೋಪಥಿ ಮೆಡಿಕಲ್ ಕಾಲೇಜ್, ಹಿಂಗುಲಾAಬಿಕಾ ಆಯುರ್ವೇದ ಆಸ್ಪತ್ರೆ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ವಿವೇಕ ಜಾಗೃತಿ ವಿದ್ಯಾಪೀಠದ ಪ್ರಮುಖರು, ವಿವಿಧ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜನರ ಮಧ್ಯೆ ನಿಲ್ಲಿಸಿದ ಸಿಇಒ ಕಾರು: ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾ ಸಾಗಿತು. ನೂರಾರು ಜನರು ಡಿಸಿ ಕಚೇರಿ ಮೆಟ್ಟಿಲುಗಳಲ್ಲಿ ಭಾವಚಿತ್ರಕ್ಕಾಗಿ ಆಸೀನರಾಗಿದ್ದರು. ಆದರೆ ಜಿಪಂ ಸಿಇಒ ಕಾರು ಮಾತ್ರ ಮೆಟ್ಟಿಲುಗಳ ಎದುರು, ಜನರ ಮಧ್ಯೆ ನಿಲ್ಲಿಸಿದ್ದು ಟೀಕೆಗೆ ಗುರಿಯಾಯಿತು. ಎರಡು ಕಿಲೋಮೀಟರ್ ನಡೆದಿರುವ ಜಿಪಂ ಸಿಇಒಗೆ ಅಷ್ಟು ತುರ್ತು ಏನಿತ್ತು? ಸ್ವಲ್ಪ ಮುಂದೆ ನಿಲ್ಲಿಸಿದರೆ ನಡೆಯಲು ಆಗುತ್ತಿರಲಿಲ್ಲವೇ ಎಂದು ಯೋಗ ಸಾಧಕರೊಬ್ಬರು ಪ್ರಶ್ನಿಸಿದರು. ಇನ್ನು ಜಾಥಾದಲ್ಲಿ ಪಾಲ್ಗೊಂಡವರಿಗೆ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆ ಮಾಡಿರಲಿಲ್ಲ. ಜಿ¯್ಲÁಧಿಕಾರಿ ಸೇರಿ ಹಲವು ಜಿ¯್ಲÁ ಮಟ್ಟದ, ಪೊಲೀಸ್ ಅಧಿಕಾರಿಗಳು ಗೈರಾಗಿದ್ದು ಹಲವರನ್ನು ಕೆರಳಿಸಿತು.