ಜಿಲ್ಲೆ

ಯೋಗದಿಂದ ಭಾರತಕ್ಕೆ ವಿಶ್ವಮನ್ನಣೆ : ಶಾಸಕ ಜ್ಯೋತಿಗಣೇಶ್​ ಹೇಳಿಕೆ, ಕಾರ್ಯಕ್ರಮಕ್ಕೆ ಚಾಲನೆ

ತುಮಕೂರು: ಪ್ರೆಸ್​ ಕ್ಲಬ್​ ತುಮಕೂರು ವತಿಯಿಂದ ನಗರದ ಸರ್ಕಾರಿ ಜೂನಿಯರ್​ ಕಾಲೇಜು ಮೈದಾನದಲ್ಲಿರುವ ಆಲದಮರದ ಪಾರ್ಕ್​ನಲ್ಲಿ ಯೋಗ ದಿನಾಚರಣೆ ನಡೆಯಿತು.

"ಯೋಗ ಟೂ ಫಿಟ್​' ಎಂಬ ೂಷವಾಕ್ಯದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಚಾಲನೆ ನೀಡಿದರು. ಪ್ರಧಾನಿ ನರೇಂದ್ರಮೋದಿ ಯೋಗಕ್ಕೆ ವಿಶ್ವಮನ್ನಣೆ ತಂದುಕೊಟ್ಟಿದ್ದು ಇಂದು ದೇಶದೆಲ್ಲೆಡೆ ಯೋಗದ ಉಪಯೋಗ ಸಾರಲಾಗುತ್ತಿದೆ ಎಂದು ಜಿ.ಬಿ.ಜ್ಯೋತಿಗಣೇಶ್​ ಹೇಳಿದರು.

ಅನುಪಯುಕ್ತವಾಗಿದ್ದ ಆಲದಮರ ಪಾರ್ಕ್​ ಇಂದು ಸದುಪಯೋಗವಾಗಿದೆ, ಜನೋಪಯೋಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ಪಾರ್ಕ್​ಗೆ ತುಮಕೂರು ಪ್ರೆಸ್​ ಕ್ಲಬ್​ ಮೆರುಗು ತಂದಿದೆ ಎಂದರು.

ಬಿಜೆಪಿ ಮುಖಂಡ ಅರಕೆರೆ ರವೀಶ್​ ಮಾತನಾಡಿ, ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಎಲ್ಲರೂ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ, ಈ ಒತ್ತಡದಿಂದ ಪಾರಾಗಲು ಯೋಗ ಪರಿಣಾಮಕಾರಿ ಎನ್ನಿಸಿದ್ದು ಎಲ್ಲರೂ ಅಭ್ಯಾಸ ಮುಂದುವರಿಸೋಣ ಎಂದರು.

ಪಾಲಿಕೆ ಸದಸ್ಯೆ ಗಿರಿಜಾ ಧನ್ಯಕುಮಾರ್​ ಮಾತನಾಡಿ, ಯೋಗ ಜೀವನದ ಅವಿಭಾಜ್ಯ ಅಂಗವಾಗಬೇಕು, ಎಲ್ಲರೂ ಕಡ್ಡಾಯವಾಗಿ ಯೋಗದ ಅಭ್ಯಾಸವನ್ನು ಪ್ರತಿನಿತ್ಯ ಮಾಡಬೇಕು ಎಂದರು.

ತಹಸೀಲ್ದಾರ್​ ಮೋಹನ್​ಕುಮಾರ್​, ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷ ನರಸಿಂಹರಾಜು, ಫಿಟ್ನೋಲಿಕ್​ ಜಿಮ್​ ಮುಖ್ಯಸ್ಥೆ ಶರ್ಮಿಳಾ, ಅಮೋ ನ್ಯೂಸ್​ ಮುಖ್ಯಸ್ಥ ಶ್ರೀನಿವಾಸರೆಡ್ಡಿ, ಪ್ರೆಸ್​ ಕ್ಲಬ್​ ನಿರ್ದೇಶಕರಾದ ಸತೀಶ್​, ದಾದಪೀರ್​, ಎನ್​ಸಿಸಿ ಅಧಿಕಾರಿ ಪ್ರದಿಪ್​ಕುಮಾರ್​, ಯೋಗ ಶಿಕ್ಷಕರಾದ ಶ್ರೀನಿವಾಸ್​, ಗೀತಾಂಜಲಿ ಮತ್ತಿತರರು ಇದ್ದರು.