ಜಿಲ್ಲೆ

ಯೋಗದಿಂದ ಜೀವನ ಪಾವನ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಿತ್ಯ ಯೋಗಭ್ಯಾಸ ಮಾಡಿದ್ದಲ್ಲಿ ಜೀವನ ಪಾವನವಾಗುತ್ತದೆ ಎಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ್ ಹೇಳಿದರು.

ನಗರದ ಶ್ರೀ ಆರೂಢ ಯೋಗ ಕೇಂದ್ರ ಶ್ರೀ ಸಿದ್ಧಾರೂಢ ಮಠದಿಂದ ಆಯೋಜಿಸಿದ್ದ ಯೋಗ ನಡಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಋಷಿ ಮುನಿಗಳಿಂದ ಹುಟ್ಟಿದ ಯೋಗವನ್ನು ಇಡೀ ಜಗತ್ತೇ ಒಪ್ಪಿಕೊಂಡಿದೆ. ಜೂನ್ 21ರಂದು 10ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ಮಾಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಇಂದು ಯೋಗ ನಡಿಗೆ ಕಾರ್ಯಕ್ರಮ ಆಯೋಜಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಟ್ರಸ್ಟಿ ಉದಯ ನಾಯಕ, ಎಸ್.ಎಂ. ಕೊಳಕೂರ್, ವಿಶ್ವನಾಥ್ ಹಿರೇಗೌಡರ್ ಯೋಗದ ಮಹತ್ವದ ಬಗ್ಗೆ ಮಾತನಾಡಿದರು. ಯೋಗ ಗುರು ಪಂಚಲಿಂಗಪ್ಪ ಕವಲೂರ್ ಯೋಗಾಸನ ಹೇಳಿಕೊಟ್ಟರು. ಯೋಗ ಪಟು ವಿನಾಯಕ ಕೊಂಗಿ, ಇತರರು ಇದ್ದರು.