ಜಿಲ್ಲೆ

ಯೋಗ ಸುಯೋಗದ ಜೀವನ ನಮ್ಮದಾಗಲಿ : ಜಿಲ್ಲಾದ್ಯಂತ ವಿಶ್ವ ಯೋಗ ದಿನಾಚರಣೆ, ಸಾವಿರಾರು ಮಂದಿ ಭಾಗಿ

ತುಮಕೂರು: "ಮಾನವೀಯತೆಗಾಗಿ ಯೋಗ' ೂಷವಾಕ್ಯದೊಂದಿಗೆ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆಯಲ್ಲಿ ನಗರದ ಎಂಪ್ರೆಸ್​ ಸರ್ಕಾರಿ ಪಬ್ಲಿಕ್​ ಶಾಲೆಯ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾದರು. ಎಂಪ್ರೆಸ್​ ಶಾಲೆ ಸಭಾಂಗಣದಲ್ಲಿ ಮಂಗಳವಾರ ವಿಜಯವಾಣಿ, ದಿಗ್ವಿಜಯ 24/7 ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಯೋಗ್ಯಾಭ್ಯಾಸದ ನಂತರ ಯೋಗ ಕುರಿತು ಯೋಗ ಶಿಕ್ಷಕ ರಾಮಯ್ಯ ವಿಶೇಷ ಉಪನ್ಯಾಸ ನೀಡಿದರು. ಮಾನವೀಯತೆಗಾಗಿ ಯೋಗ ಈ ಬಾರಿಯ ೂಷವಾಕ್ಯವಾಗಿದೆ. ಯೋಗದಿಂದ ಜೀವನ ಅನುಭವ ಗಳಿಸಿಕೊಳ್ಳೋಣ, ಎಲ್ಲರನ್ನು ಪ್ರೀತಿಸುವ ಮಾನವೀಯತೆ ಬೆಳೆಸಿಕೊಂಡು ಪರಸ್ಪರ ಸಹಕಾರದಿಂದ ಯೋಗ ಸುಯೋಗದ ಜೀವನ ನಮ್ಮದಾಗಲಿ ಎಂದು ಹೇಳಿದರು. ಭಾರತೀಯ ಶ್ರೀಮಂತ ಪರಂಪರೆಯಲ್ಲಿ ಯೋಗ ಕೂಡ ಒಂದಾಗಿದ್ದು 6 ಸಾವಿರದಷ್ಟು ಇತಿಹಾಸ ಯೋಗಕ್ಕಿದೆ, 2014ರಿಂದ ಯೋಗಕ್ಕೆ ವಿಶ್ವಮನ್ನಣೆ ದೊರೆತಿದ್ದು ಎಲ್ಲರೂ ಪ್ರತಿನಿತ್ಯ ಯೋಗಾಭ್ಯಾಸ ನಡೆಸಬೇಕು ಎಂದು ಸಲಹೆ ನೀಡಿದರು. ಯೋಗ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡುವ ಪ್ರಮುಖ ಸಾಧನ ಎನ್ನಿಸಿದೆ, ಯೋಗ ಬಲ್ಲವರಿಗೆ ರೋಗಗಳಿರುವ ಸಾಧ್ಯತೆ ತುಂಬ ಕಡಿಮೆ, ಎಲ್ಲರೂ ಉತ್ತಮ ಆರೋಗ್ಯಕ್ಕಾಗಿ ಕಡ್ಡಾಯವಾಗಿ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳಬೇಕು ಎಂದರು. ಮನಸ್ಸು ಹಾಗೂ ದೇಹ ಎರಡೂ ಏಕಕಾಲದಲ್ಲಿ ತೊಡಗಿಸಿಕೊಳ್ಳುವುದರಿಂದ ಜೀವನದಲ್ಲಿ ಸದಾ ಏಕಾಗ್ರತೆ ಮೂಡುತ್ತದೆ, ಪ್ರತಿಯೊಂದು ಆಸನದಿಂದ ದೇಹದ ಪ್ರತಿಯೊಂದು ಅಂಗಾಗಗಳಿಗೂ ಕ್ರಮಬದ್ಧವಾಗಿ ವ್ಯಾಯಾಮವಾಗಲಿದೆ. ಪ್ರತಿದಿನ ಯೋಗ ಮಾಡುವುದರಿಂದ ದೇಹ, ಮನಸು ಉಲ್ಲಾಸಗೊಳ್ಳಲಿದೆ, ಾನಾರ್ಜನೆ ಹೆಚ್ಚಲಿದೆ ಎಂದರು. ಪ್ರಾಚಾರ್ಯ ಷಣ್ಮಖಪ್ಪ ಮಾತನಾಡಿ, ವಿದ್ಯಾರ್ಥಿಗಳು ಪ್ರತಿನಿತ್ಯ ಯೋಗ ಅಭ್ಯಾಸ ಮಾಡುವುದರಿಂದ ನೆನಪಿನ ಶಕ್ತಿ ವೃದ್ಧಿಯಾಗಲಿದೆ, ಆರೋಗ್ಯ ಕೂಡ ವೃದ್ಧಿಯಾಗುವುದರಿಂದ ಎಲ್ಲರೂ ಶಾಲೆ, ಕಾಲೇಜುಗಳಿಂದಲೇ ಅಭ್ಯಾಸ ಆರಂಭಿಸಬೇಕು ಎಂದರು. ದೈಹಿಕ ಶಿಕ್ಷಣ ನಿರ್ದೇಶಕ ಜಯರಾಮ್​, ಪರಮೇಶ್ವರಪ್ಪ, ಉಪಪ್ರಾಚಾರ್ಯ ಶಿವಾಜಿರಾವ್​, ಗುಬ್ಬಿ ಪಿಯು ಕಾಲೇಜು ಪ್ರಾಚಾರ್ಯ ಮಂಜುನಾಥ್​, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾದ ನವೀನ್​ಕುಮಾರ್​, ಶಿವಪ್ರಸಾದ್​, ಮಂಜುಳಾ, ರಾಧಮ್ಮ, ಶಿಕ್ಷಕರಾದ ಡಿ.ಎಸ್​.ಸೋಮಶೇಖರ್​, ಕೆ.ಪಿ.ಮುತ್ತುನಾಯಕ್​, ವಿಜಯವಾಣಿ ಪ್ರಸಾರಂಗ ವಿಭಾಗದ ಜಿ.ವೆಂಕಟೇಶ್​. ಬಿ.ಆರ್​.ಶಶಿಧರ್​ ಮತ್ತಿತರರು ಜತೆಗಿದ್ದರು.

ಅಂತಾರಾಷ್ಟ್ರೀಯ ಮನ್ನಣೆ ಗಳಿಸಿರುವ ಯೋಗದ ಮಹತ್ವ ಅರಿತಿರುವ ವಿಜಯವಾಣಿ, ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಯೋಗಾ ದಿನಾಚರಣೆ ಯಶಸ್ವಿಯಾಗಿದೆ. ಭಾಗವಹಿಸಿದ್ದ ಎಲ್ಲರೂ ನಿರಂತರ ಅಭ್ಯಾಸ ಮುಂದುವರಿಸಿ ಯೋಗದ ಸದುಪಯೋಗ ಪಡೆಯಬೇಕು. ಷಣ್ಮಖಪ್ಪ ಪ್ರಾಚಾರ್ಯ, ಎಂಪ್ರೆಸ್​ ಸರ್ಕಾರಿ ಪಬ್ಲಿಕ್​ ಶಾಲೆ