ಜಿಲ್ಲೆ

ಯೋಗ, ಸಂಗೀತದಿಂದ ಆರೋಗ್ಯಪೂರ್ಣ ಸಂಸ್ಕಾರ

ಚಿತ್ರದುರ್ಗ: ಭಾರತೀಯ ಸಂಸ್ಕೃತಿಯಲ್ಲಿ ಯೋಗ ಮತ್ತು ಸಂಗೀತ ಎರಡೂ ಅತ್ಯುತ್ತಮ ಸಾಂಸ್ಕೃತಿಕ ಮೌಲ್ಯಗಳಾಗಿವೆ ಎಂದು ಚಳ್ಳಕೆರೆ ಬಾಪೂಜಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಆರ್.ಎಸ್.ಉಮೇಶ್ ಅಭಿಪ್ರಾಯಪಟ್ಟರು.

ಚಿತ್ರದುರ್ಗ ತಾಲೂಕು ಮಲ್ಲಾಪುರ ಚಿನ್ಮಯ ಮಯೂರ ಯೋಗ ಕ್ರೀಡಾ ಸಾಂಸ್ಕೃತಿಕ ಸಂಸ್ಥೆ, ಕ್ರೀಡಾ ಭಾರತಿ, ರಂಗಸೌರಭ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಇಂಗಳದಾಳ್ ಗ್ರಾಮದ ತಳವಾರ ಸಂಚಲಪ್ಪ ಪ್ರೌಢಶಾಲೆಯಲ್ಲಿ ಶನಿವಾರ ಅಂತಾರಾ ಷ್ಟ್ರೀಯ ಯೋಗ ಮತ್ತು ಸಂಗೀತ ದಿನಾಚರಣೆಗಳ ಅಂಗವಾಗಿ ಉಪನ್ಯಾಸ, ಯೋಗ ಪ್ರಾತ್ಯಕ್ಷಿಕೆ, ನಾಡ, ರೈತ ಹಾಗೂ ರಾಷ್ಟ್ರಗೀತೆಗಳ ಗಾಯನ ತರಬೇತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಯೋಗ, ಸಂಗೀತ ಆರೋಗ್ಯಪೂರ್ಣ ಸಂಸ್ಕಾರಗಳನ್ನು ಕಲಿಸುತ್ತವೆ. ಯೋಗ ಋಷಿ ಸಂಸ್ಕೃತಿ ಗುರುಕುಲ ಪದ್ಧತಿ ಕೊಡುಗೆಯಾಗಿದೆ. ಗಾನರೂಪದ ಶ್ಲೋಕಗಳಿಂದ ಕೂಡಿರುವ ಸಾಮವೇದ ಸಂಗೀತವನ್ನು ಪ್ರತಿನಿಧಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಜಿ.ಪಿ. ಆನಂದಕುಮಾರ್ ಮಾತನಾಡಿದರು. ಶಿಕ್ಷಕರಾದ ಎಂ. ರಂಗನಾಥ, ಎಸ್.ಪಿ. ಮಂಜುನಾಥ, ಎಚ್. ಧನಂಜಯ, ಬಿ.ವಿ. ಪ್ರಿಯಾಂಕಾ, ಯೋಗಶಿಕ್ಷಕ ಎಂ.ಆರ್. ಮಂಜುನಾಥ, ಶಿವಮೊಗ್ಗ ವಿಭಾಗದ ಕ್ರೀಡಾಭಾರತಿ ಸಹ ಸಂಯೋಜಕ ಎಸ್. ಶಂಕರ್, ಸಂಪನ್ಮೂಲ ವ್ಯಕ್ತಿಗಳಾದ ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ, ಯೋಗ ಶಿಕ್ಷಕ ಎಂ.ಬಿ. ಮುರುಳಿ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಆದಪ್ಪಸ್ವಾಮಿ ಪ್ರಾರ್ಥಿಸಿದರು. ಶಿಕ್ಷಕರಾದ ಆರ್. ರುದ್ರಸ್ವಾಮಿ ಸ್ವಾಗತಿಸಿ, ಜಿ.ವಿ.ತೇಜಸ್ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಎಂ. ದ್ಯಾನೇಶ್ವರಿ ನಿರೂಪಿಸಿದರು.