ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಬ್ರಹ್ಮೀಭೂತ ವಾಸುದೇವ ಮಹಾರಾಜ್ ಫೌಂಡೇಷನ್‌ನಿಂದ ಯೋಗ ಶಿಕ್ಷಕರಿಗೆ ವಿಶ್ವಮಾನ್ಯ ಯೋಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯೋಗ ಕ್ಷೇತ್ರದಲ್ಲಿನ ಸಾಧನೆಗಾಗಿ ಬಿ.ಎನ್.ಎಸ್. ಅಯ್ಯಂಗಾರ್, ಡಾ.ಟಿ.ಎನ್. ಶಶಿಕುಮಾರ್, ಡಾ.ಸಿ. ರಮೇಶ್‌ಶೆಟ್ಟಿ, ಸಂತೋಷ್‌ಕುಮಾರ್, ಎಂ.ಮೋಹನ್ ಪ್ರಶಸ್ತಿ ಸ್ವೀಕರಿಸಿದರು.
ಸಮಾಜ ಸೇವಕ ರಘುರಾಂ ವಾಜಪೇಯಿ ಮಾತನಾಡಿ, ಯೋಗಾಭ್ಯಾಸದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ವ್ಯಂಗ್ಯಚಿತ್ರಕಾರ ನಾಗೇಂದ್ರ ಬಾಬು, ಮೈಸೂರು ಯೋಗ ಸಂಸ್ಥೆಯ ಅನಂತು ಇತರರು ಇದ್ದರು.