ಜಿಲ್ಲೆ

ಯೋಗ ಮಾನಸಿಕ ಸ್ಥಿರತೆ-ಏಕಾಗ್ರತೆ ಹೆಚ್ಚಿಸುತ್ತದೆ

ಶಹಾಪುರ: ಪ್ರತಿದಿನ ಯೋಗ ಮಾಡುವುದರಿಂದ ಮನಸ್ಸು ಪ್ರಶಾಂಶವಾಗಿದ್ದು, ಗಟ್ಟಿಯಾಗುತ್ತದೆ ಎಂದು ಯೋಗ ಗುರು ಲಕ್ಷö್ಮಣ ಲಾಳಸೇರಿ ಹೇಳಿದರು.

ತಾಲೂಕಿನ ರಸ್ತಾಪುರ ಗ್ರಾಮದಲ್ಲಿ ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಪದವಿ ಕಾಲೇಜಿನ ಎನ್‌ಎಸ್‌ಎಸ್ ಎ ಮತ್ತು ಬಿ ಘಟಕಗಳ ವತಿಯಿಂದ ಹಮ್ಮಿಕೊಂಡ ವಾರ್ಷಿಕ ಶಿಬಿರದಲ್ಲಿ ಯೋಗ ತರಬೇತಿ ನೀಡಿ ಮಾತಾನಾಡಿದ ಅವರು, ಮಾನಸಿಕ ಸ್ಥಿರತೆ ಹಾಗೂ ಏಕಾಗ್ರತೆ ಹೆಚ್ಚಿಸುವಲ್ಲಿ ಯೋಗ ಪ್ರಮುಖ ಪಾತ್ರವಹಿಸುತ್ತದೆ. ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಲು ಮತ್ತು ಪ್ರಬಲವಾದ ಬುದ್ಧಿ ಸಾಮರ್ಥ್ಯವು ಮನುಷ್ಯನಲ್ಲಿ ರೂಪಗೊಳ್ಳಲು ಯೋಗ ಅತ್ಯಂತ ಪರಿಣಾಮಕಾರಿಯಾಗಿದೆ.

ವಿದ್ಯಾರ್ಥಿಗಳು ಪ್ರತಿದಿನ ಬೆಳಗ್ಗೆ ಯೋಗಾಸನ ಮಾಡಿ ಆರೋಗ್ಯಕರ ಬದುಕನ್ನು ಸಾಗಿಸಬೇಕು ಎಂದು ಹಲವಾರು ಯೋಗಾಸನಗಳ ಮೂಲಕ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ದೈಹಿಕ ಶಿಕ್ಷಣ ಶಿಕ್ಷಕ ಯಂಕಪ್ಪ ಕೊಳೂರು, ಪ್ರಾಂಶುಪಾಲ ಪ್ರೊ. ಶಿವಲಿಂಗಣ್ಣ ಸಾಹು, ಉಪನ್ಯಾಸಕರಾದ ಗಂಗಪ್ಪ ಹೊಸಮನಿ, ಸಂಗಣ್ಣ ದಿಗ್ಗಿ, ದೇವಿಂದ್ರಪ್ಪ ಆಲ್ದಾಳ, ಸತೀಶ ತುಳೇರ, ಡಾ. ಶುಭಲಕ್ಷಿö್ಮÃ ಬಬಲಾದಿ, ಎನ್‌ಎಸ್‌ಎಸ್ ಘಟಕದ ಅಧಿಕಾರಿಗಳಾದ ರಾಘವೇಂದ್ರ ಹಾರಣಗೇರಾ, ಭೀಮಪ್ಪ ಭಂಡಾರಿ ಇತರರಿದ್ದರು.