ಔರಾದ್‌ನಲ್ಲಿ ಪಟ್ಟಣದಲ್ಲಿ ಬಿಜೆಪಿ ಮಂಡಲ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಶಾಸಕ ಪ್ರಭು ಚವ್ಹಾಣ್ ಯೋಗ ಮಾಡಿ ಗಮನ ಸೆಳೆದರು. 
ಜಿಲ್ಲೆ

ಯೋಗ ಮಾನಸಿಕ ಆರೋಗ್ಯಕ್ಕೂ ಸಹಕಾರಿ

ಔರಾದ್: ಯೋಗ ಕೇವಲ ಶರೀರಕ್ಕೆ ಮಾತ್ರವಲ್ಲದೇ ಮಾನಸಿಕ ಆರೋಗ್ಯಕ್ಕೂ ಸಹಕಾರಿ. ಯೋಗದಿಂದ ಮಾನಸಿಕ ಶುದ್ಧಿ, ಚಂಚಲತೆ ದೂರವಾಗುತ್ತದೆ.ಎಲ್ಲ ಶಾಲೆಗಳಲ್ಲಿ ಪ್ರತಿದಿನ ಕನಿಷ್ಠ ಅರ್ಧ ಗಂಟೆ ಯೋಗಾಭ್ಯಾಸ ಮಾಡಿಸಬೇಕೆಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.

ಪಟ್ಟಣದಲ್ಲಿ ಬಿಜೆಪಿ ಮಂಡಲ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿರುವ ಅದೆಷ್ಟೋ ಕಾಯಿಲೆಗಳು ಯೋಗದಿಂದ ವಾಸಿಯಾಗಿರುವ ಉದಾಹರಣೆಗಳಿವೆ. ಹಾಗಾಗಿ ಯೋಗವನ್ನು ಜೀವನದ ಭಾಗವಾಗಿಸಿಕೊಳ್ಳಬೇಕು. ಮಕ್ಕಳಿಗೆ ಯೋಗದ ಮಹತ್ವ ತಿಳಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಯೋಗಗುರು ಹಾವಗಿರಾವ ವಟಗೆ, ಧನರಾಜ ವಲ್ಲೇಪುರೆ, ಶಿವರಾಜ ಶೆಟಕಾರ, ಶಿವರಾಜ ಶಿವರಾಜ ಝುಲಂಡೆ ಯೋಗಾಭ್ಯಾಸ ಮಾಡಿಸಿದರು.

ಯೋಗ ದಿನಾಚರಣೆ ಸಂಚಾಲಕ ಶಿವರಾಜ ಅಲ್ಮಾಜೆ, ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ, ದಯಾನಂದ ಘೂಳೆ, ಡಾ.ವೈಜಿನಾಥ ಬುಟ್ಟೆ, ಸಚಿನ ರಾಠೋಡ್, ಕೇರಬಾ ಪವಾರ, ಖಂಡೋಬಾ ಕಂಗಟೆ, ಪ್ರವೀಣ ಕಾರಬಾರಿ, ಮಹಾದೇವ ಅಲ್ಮಾಜೆ, ಸಂಜು ವಡೆಯರ, ಯಾದು ಮೇತ್ರೆ, ಬಸವರಾಜ ಹಳ್ಳೆ ಇತರರಿದ್ದರು.