ಜಿಲ್ಲೆ

ಯೋಗ, ಧ್ಯಾನ ರೂಢಿಸಿಕೊಡರೆ ಜೀವನ ಸಾರ್ಥಕ

ಚಿತ್ರದುರ್ಗ: ನಿತ್ಯ ಯೋಗ, ಧ್ಯಾನ ಹಾಗೂ ಕನ್ನಡದಲ್ಲೇ ಮಾತನಾಡುವ ಅಭ್ಯಾಸಗಳನ್ನು ರೂಢಿಸಿಕೊಂಡರೆ ಬದುಕು ಸಾರ್ಥಕವಾಗಲಿದೆ ಎಂದು ಉಪನ್ಯಾಸಕಿ ಸರೀನಾ ಹೇಳಿದರು.

ಜಿಲ್ಲಾ ಪತಂಜಲಿ ಯೋಗ ಸಮಿತಿ, ಜಿಲ್ಲಾ ಪತಂಜಲಿ ಕಿಸಾನ್ ಸಮಿತಿ ನಗರದ ದವಳಗಿರಿ ಬಡಾವಣೆಯಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಉಚಿತ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಯೋಗ, ಧ್ಯಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಯೋಗ ಸಮಿತಿಗಳ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕ ಶಶಿಕಿರಣ್ ಮಾತನಾಡಿ, ಕರ್ನಾಟಕದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕನ್ನಡದ ಬಗ್ಗೆ ಗೌರವ ಹೊಂದಿರಬೇಕು ಎಂದರು.

ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷ ದೇವಾನಂದ ನಾಯಕ್ ಮಾತನಾಡಿ, ಯೋಗ ಬದುಕನ್ನು ಬದಲಾಯಿಸುವ ಜೀವನ ಮೌಲ್ಯವಾಗಿದೆ ಎಂದರು.

ಇದೇ ವೇಳೆ ಯೋಗ ಶಿಕ್ಷಕರನ್ನು ಸನ್ಮಾನಿಸಲಾಯಿತು. ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ, ಶ್ರೀಕಾಂತ್, ಮುನಿಯಪ್ಪ, ಸುಭದ್ರಮ್ಮ, ಲಲಿತಾಬೇಂದ್ರೆ, ವಿಜಯಲಕ್ಷ್ಮೀ, ಕಮಲಮ್ಮ, ರಂಗಣ್ಣ, ರಾಜಪ್ಪ, ಈಶ್ವರಪ್ಪ, ಶ್ರೀಧರ್, ತಿಪ್ಪೇಸ್ವಾಮಿ, ಶಿವಸ್ವಾಮಿ, ಶಿವಲಿಂಗಪ್ಪ, ರವಿಅಂಬೇಕರ್ ಇತರರು ಇದ್ದರು.

ಸರ್ವದಾ ಪ್ರಾರ್ಥಿಸಿದರು. ಕೆಂಚವೀರಪ್ಪ ಸ್ವಾಗತಿಸಿ, ಗುರುಮೂರ್ತಿ ವಂದಿಸಿದರು. ರವೀಂದ್ರ ನಿರೂಪಿಸಿದರು.