filter: 0; fileterIntensity: 0.000000; filterMask: 0; captureOrientation: 0; shaking: 0.246506; highlight: 0; algolist: 0; multi-frame: 1; brp_mask: 0; brp_del_th: 0.0000,0.0000; brp_del_sen: 0.0000,0.0000; delta:null; module: photo;hw-remosaic: false;touch: (0.48342556, 0.5198922);sceneMode: 8;cct_value: 0;AI_Scene: (-1, -1);aec_lux: 238.0;aec_lux_index: 0;albedo: ;confidence: ;motionLevel: 0;weatherinfo: null;temperature: 39;zeissColor: bright; 
ಜಿಲ್ಲೆ

ಯೋಗ, ಧ್ಯಾನ, ಉತ್ತಮ ಆಹಾರದಿಂದ ಆರೋಗ್ಯ ರಕ್ಷಣೆ: ಸ್ವಾಮಿ ಪರಮಾರ್ಥ ದೇವ್ ಜೀ ಸಲಹೆ

ಹಾಸನ: ಯೋಗ, ಧ್ಯಾನದಿಂದ ದೇಹದ ಪ್ರತಿ ಅಂಗಾಂಗಗಳ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುವುದಲ್ಲದೇ ತಲೆಯಿಂದ ಪಾದದವರೆಗೂ ಎಲ್ಲಾ ಅಂಗಾಂಗಗಳಿಗೂ ಯೋಗದಿಂದ ಪ್ರಯೋಜನ ಇದೆ. ಇದಕ್ಕೆ ಪೂರಕವಾಗಿ ಪ್ರತಿನಿತ್ಯ ಉಗುರು ಬೆಚ್ಚಗಿನ ನೀರು, ಹಣ್ಣು ಹಂಪಲುಗಳು ಹಾಗೂ ಗುಣಮಟ್ಟದ ಆಹಾರ ಪದ್ಧತಿಯಿಂದ ಆರೋಗ್ಯ ರಕ್ಷಣೆ ಸಾಧ್ಯ ಎಂದು ಹರಿದ್ವಾರ ಪತಂಜಲಿ ಯೋಗ ಪೀಠದ ಮುಖ್ಯ ಕೇಂದ್ರೀಯ ಪ್ರಭಾರಿ ಸ್ವಾಮಿ ಪರಮಾರ್ಥ ದೇವ್ ಜೀ ಸಲಹೆ ನೀಡಿದರು.

ನಗರದ ಚನ್ನಪಟ್ಟಣದಲ್ಲಿರುವ ಗೋಮತಿ ಕಲ್ಯಾಣ ಮಂಟಪದಲ್ಲಿ ಪತಂಜಲಿ ಯೋಗ ಪರಿವಾರದಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಉಚಿತ ಯೋಗ, ಧ್ಯಾನ ಪ್ರಾಣಾಯಾಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬೆಳಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಹಾಗೂ ಹಸುವಿನ ತುಪ್ಪ ಸೇವನೆಯಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಹಗಲು ಹೊತ್ತಿನಲ್ಲಿ ಮಜ್ಜಿಗೆ ಸೇವನೆ, ರಾತ್ರಿ ಮಲಗುವಾಗ ಹಾಲು ಸೇವನೆ ಆರೋಗ್ಯಕ್ಕೆ ಉತ್ತಮ. ಯೋಗದ ಜತೆಗೆ ಉತ್ತಮ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಮನುಷ್ಯನ ಜತೆ ಗೋವುಗಳಿಗೂ ಪತಂಜಲಿ ಆರೋಗ್ಯ ಆಹಾರ ಲಭ್ಯವಿದ್ದು, ಅವುಗಳನ್ನು ಬಳಸಿಕೊಳ್ಳುವಂತೆ ಕಿವಿಮಾತು ಹೇಳಿದರು. ತುಳಸಿ, ಅಲೋವೆರಾ ಸೇರಿದಂತೆ ನಮ್ಮ ಸುತ್ತಮುತ್ತ ಸಿಗುವ ಹಲವು ಗಿಡಮೂಲಿಕೆಗಳನ್ನು ಉಪಯೋಗಿಸಿದರೆ ಅನೇಕ ಆರೋಗ್ಯ ಪ್ರಯೋಜನಗಳು ಲಭ್ಯವಾಗಲಿವೆ. ಬೆಳ್ಳಗೆ ಖಾಲಿ ಹೊಟ್ಟೆಗೆ ಒಂದು ಚಮಚ ತುಪ್ಪ ಸೇವನೆಯಿಂದ ಹೊಟ್ಟೆಯಲ್ಲಿನ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಲಭ್ಯವಾಗಲಿವೆ ಎಂದು ಹೇಳಿದರು.

ಯೋಗಪಟುಗಳು ವಿವಿಧ ಯೋಗ ಭಂಗಿಗಳನ್ನು ಸ್ವಾಮೀಜಿ ಎದುರು ಪ್ರದರ್ಶಿಸಿ ಗಮನ ಸೆಳೆದರು. ಇದೆ ವೇಳೆ ಅಗ್ನಿಹೋತ್ರ ನಡೆಯಿತು.

ಶಿಬಿರದಲ್ಲಿ ಪತಂಜಲಿ ಯೋಗ ಪರಿವಾರದ ರಾಜ್ಯ ಪ್ರಭಾರಿ ಭವರ ಲಾಲ್ ಜಿ ಆರ್ಯ, ಪರಿವಾರದ ನಿಕಟ ಪೂರ್ವ ಜಿಲ್ಲಾ ಸಂರಕ್ಷಕ ಹರಿಹರಪುರ ಶ್ರೀಧರ್, ಜಿಲ್ಲಾ ಸಂರಕ್ಷಕ ಲೋಕನಾಥ್, ಭಾರತ್ ಸ್ವಾಭಿಮಾನ್ ಟ್ರಸ್ಟ್ ಜಿಲ್ಲಾ ಪ್ರಭಾರಿ ಶೇಷಪ್ಪ, ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಗಿರೀಶ್, ಯುವ ಭಾರತ್ ಜಿಲ್ಲಾ ಪ್ರಭಾರಿ ಸುರೇಶ್ ಪ್ರಜಾಪತಿ, ಕಿಸಾನ್ ಸೇವಾ ಸಮಿತಿ ಜಿಲ್ಲಾ ಪ್ರಭಾರಿ ನಾಗೇಶ್, ಮಹಿಳಾ ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಶಾರದಾ ಧರ್ಮಾನಂದ್, ಗೋಮತಿ ಕಲ್ಯಾಣ ಮಂಟಪದ ಮಾಲೀಕ ದಿನೇಶ್, ಬಿಜೆಪಿ ಮುಖಂಡ ವೇಣುಗೋಪಾಲ್, ಕಾಂತರಾಜು, ವಿಜಯಕುಮಾರ್, ಮುರಳಿ, ನಿಟ್ಟೂರು ಜಯರಾಮ್, ಡಾ. ಪಾಲಾಕ್ಷ ಇತರರು ಉಪಸ್ಥಿತರಿದ್ದರು.