ಹುಬ್ಬಳ್ಳಿ: ದೇಹ ಮತ್ತು ಮನಸ್ಸನ್ನು ಆರೋಗ್ಯವಂತವಾಗಿಸುವ, ಉತ್ತಮ ವಿಚಾರ ಮೂಡಿಸುವ ಮೂಲಕ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವ ಶಕ್ತಿ ಯೋಗಕ್ಕೆ ಇದೆ. ಯೋಗದಿಂದ ಅಮೂಲ್ಯ ಮಾನವ ಸಂಪತ್ತು ನಿರ್ವಿುಸಬಹುದು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.
ಯೋಗಾಭ್ಯಾಸ ಕಲೆಯೂ ಹೌದು, ವಿಜ್ಞಾನವೂ ಹೌದು. ಯೋಗಗುರು ಬಾಬಾ ರಾಮದೇವ್ ದೇಶದ ಮೂಲೆ ಮೂಲೆಗಳಿಗೆ ಯೋಗ ತಲುಪಿಸಿದ್ದಾರೆ. ಅವರ ಯೋಗ ಕೌಶಲ, ಪ್ರತಿಭೆಯನ್ನು ಮೆಚ್ಚಿ ಸ್ವತಃ ನಾನೂ ಅವರನ್ನು ಗುರು ಎಂದು ಕರೆಯುತ್ತೇನೆ ಎಂದು ತಿಳಿಸಿದರು. ವಸುಧೈವ ಕುಟುಂಬಕಂ ಕಲ್ಪನೆಯನ್ನು ಜಗತ್ತಿಗೆ ಭಾರತೀಯರು ನೀಡಿದ್ದಾರೆ. ಯುವಕರು ಸ್ವಯಂ ನಿಯಂತ್ರಣ, ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಬಾಬಾ ರಾಮದೇವ್ ಅವರು ಉಪರಾಷ್ಟ್ರಪತಿಗಳ ಉಪಸ್ಥಿತಿಯಲ್ಲಿ ವಿವಿಧ ಆಸನಗಳನ್ನು ಮಾಡಿ, ಶಿಬಿರಾರ್ಥಿಗಳಿಂದಲೂ ಮಾಡಿಸಿದರು. ಇದಕ್ಕೂ ಮುನ್ನ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹಾಗೂ ಸಂಸದ ಭಗವಂತ ಖೂಬಾ 4ನೇ ದಿನದ ಯೋಗ ಶಿಬಿರ ಉದ್ಘಾಟಿಸಿದರು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಬೀದರ್ ಸಂಸದ ಭಗವಂತ ಖೂಬಾ, ಶ್ರೀಮತಿ ಲಲಿತಾ ವಿಜಯ ಸಂಕೇಶ್ವರ, ಶ್ರೀಮತಿ ವಾಣಿ ಆನಂದ ಸಂಕೇಶ್ವರ, ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಮತ್ತಿತರರಿದ್ದರು.
ಬಾಬಾ ಹೇಳಿದ ಹೆಲ್ತ್ ಟಿಪ್ಸ್
ಯೋಗ ಮಾಡಿ ಯೋಗಿಗಳಾಗಿ
ಬೆಳಗಿನಜಾವ 5 ಗಂಟೆಗೆ ಯೋಗ ಮುದ್ರೆಗಳ ಮೂಲಕ ಶಿಬಿರ ಪ್ರಾರಂಭಿಸಿದ ಬಾಬಾ ರಾಮದೇವ್, ಜಿಮ್ೆ ಹೋಗಿ ದೇಹ ಸದೃಢಗೊಳಿಸುವ ಬದಲು ಯೋಗಾಭ್ಯಾಸದಿಂದ ದೇಹ ಹಾಗೂ ಮನಸ್ಸನ್ನು ಆರೋಗ್ಯವಾಗಿಡಿ ಎಂದು ಸಲಹೆ ನೀಡಿದರು. ಜಿಮ್ೆ
ಹೋಗುವವರು ದೇಹ ಬೆಳೆಸುವ ಉದ್ದೇಶದಿಂದ ಸ್ಟಿರಾಯ್್ಡ ಸೇವಿಸುವುದಿದೆ. ವೃದ್ಧಾಪ್ಯದಲ್ಲಿ ಅದರ ದುಷ್ಪರಿಣಾಮ ಕಾಣಿಸಿಕೊಂಡು, ರೋಗಗಳಿಂದ ಬಳಲುತ್ತಾರೆ. ನಿತ್ಯ ಯೋಗ ಮಾಡುವುದರಿಂದ ದೇಹ ಸದೃಢವಾಗುತ್ತದೆ. ಯೋಗ, ಪ್ರಾಣಾಯಾಮ ಮಾಡುವವರ ಜೀವಿತಾವಧಿಯೂ ದೀರ್ಘವಾಗಿರುತ್ತದೆ ಎಂದು ತಿಳಿಸಿದರು. ಭಾರತದಲ್ಲಿ ಯೋಗ, ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ಸರ್ಕಾರ ಅಧಿಕಾರದಲ್ಲಿದೆ.
ಸ್ವತಃ ಪ್ರಧಾನಿಯವರು ಯೋಗ ಮಾಡುತ್ತಾರೆ. ರಾಷ್ಟ್ರಪತಿ, ಉಪರಾಷ್ಟ್ರಪತಿ ಯೋಗಿಗಳು. ಜನಸಾಮಾನ್ಯರೂ ಯೋಗಿಗಳಾಗಬೇಕೆಂಬುದು ಪ್ರಧಾನಿಯವರ ಆಶಯ ಎಂದರು. ರಾಮದೇವ್ ಅವರೊಂದಿಗೆ ಪ್ರಲ್ಹಾದ ಜೋಶಿ ಹಾಗೂ ಭಗವಂತ ಖೂಬಾ ಯೋಗಾಭ್ಯಾಸ ಮಾಡುವ ಮೂಲಕ ಗಮನ ಸೆಳೆದರು.
ಕೋಶಗಳ ಪ್ರಜ್ಞೆ ಮತ್ತು ಆಮ್ಲಜನಕ ಲಭ್ಯತೆಯ ಸಂಶೋಧನೆ ಮಾಡಿದ ವಿಜ್ಞಾನಿಯೊಬ್ಬರಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಯೋಗ ಹಾಗೂ ಪ್ರಾಣಾಯಾಮದ ಮೂಲಕ ದೇಹದಲ್ಲಿ ಆಮ್ಲಜನಕ ಹೆಚ್ಚಿಸಿ, ಕೋಟ್ಯಂತರ ಜನರ ಹಲವಾರು ರೋಗಗಳನ್ನು ನಿವಾರಣೆ ಮಾಡಿದ್ದೇನೆ. ನನಗೇನು ಯಾವುದೇ ಪ್ರಶಸ್ತಿ ಬೇಕಾಗಿಲ್ಲ. ಎಲ್ಲ ರೋಗಗಳ ನಿವಾರಣೆಗೆ ಯೋಗ ಮತ್ತು ಪ್ರಾಣಾಯಾಮ ಮದ್ದು ಎಂಬುದನ್ನು ಜನರು ಅರಿತುಕೊಂಡು ಆಚರಿಸಿದರೆ ಅದೇ ದೊಡ್ಡ ಪ್ರಶಸ್ತಿ. | ಯೋಗಗುರು ಬಾಬಾ ರಾಮದೇವ್