ಚಿತ್ರದುರ್ಗ: ನಗರದ ಯೂನಿಯನ್ ಪಾರ್ಕ್‌ಗೆ ಕಾರ್ಮಿಕ ಮುಖಂಡ ದಿ.ಜಿ.ಚಂದ್ರಣ್ಣ ಅವರ ಹೆಸರಿಡುವಂತೆ ಒತ್ತಾಯಿಸಿ ಸಿಪಿಐ ಜಿಲ್ಲಾ ಮಂಡ ಳಿ ಸದಸ್ಯರು ನಗರಸಭೆ ಪೌರಾಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಪ್ರವಾಸಿ ಮಂದಿರದಿಂದ ನಗರಸಭೆವರೆಗೆ ಮೆರವಣಿಗೆ ನಡೆಸಿದ ಸದಸ್ಯರು,ಚಂದ್ರಣ್ಣ ನಗರಸಭೆ ಅಧ್ಯಕ್ಷರಾಗಿದ್ದಾಗ ಅನೇಕ ಗುರುತರ ಕೆಲಸಗಳನ್ನು ಮಾಡಿದ್ದಾರೆ. ಅಧಿಕಾರವಧಿ ನಗರದ ಹಸೀರಿಕರಣಕ್ಕೆ ಒತ್ತುಕೊಟ್ಟು 2ನೇ ಭೀಮಪ್ಪನಾಯಕರೆಂದು ಖ್ಯಾತಿ ಪಡೆದಿದ್ದರು. ಪಾ ರ್ಕಿಗೆ ಚಂದ್ರಣ್ಣ ಅವರ ಹೆಸರಿಡ ಬೇಕು. ಈವರೆಗೆ ನಗರದ ಯಾವ ರಸ್ತೆಗೂ ಕಾರ್ಮಿಕ ನಾಯಕರ ಹೆಸರು ಇಟ್ಟಿಲ್ಲ ವೆಂದು ಮುಖಂಡ ರು,ನಗರಸಭೆ ಆಯುಕ್ತೆ ಎಂ.ರೇಣುಕಾ ಅವರ ಗಮನ ಸೆಳೆದರು.
ಸಿಪಿಐ ಜಿಲ್ಲಾಕಾರ‌್ಯದರ್ಶಿ ಜಿ.ಸಿ.ಸುರೇಶ್‌ಬಾಬು,ಸಿ.ವೈ.ಶಿವರುದ್ರಪ್ಪ,ಬಿ.ಬಸವರಾಜಪ್ಪ,ಟಿ.ಆರ್.ಉಮಾಪತಿ,ದೊಡ್ಡುಳ್ಳಾರ್ತಿ ಕರಿಯ ಣ್ಣ,ಸತ್ಯಕೀರ್ತಿ,ಹನುಮಂತಪ್ಪ,ಚಂದ್ರಪ್ಪ,ಎಂ.ಬಿ.ಜಯದೇವಮೂರ್ತಿ,ತಿಪ್ಪೇಸ್ವಾಮಿ,ರವಿಕುಮಾರ್ ಮತ್ತಿತರರು ಇದ್ದರು.