ಜಿಲ್ಲೆ

ಯೂಕ್ರೇನ್​ನಿಂದ ಬಂದವರ ಭವಿಷ್ಯ ಅತಂತ್ರ

ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ

ಯೂಕ್ರೇನ್​ ಮತ್ತು ರಷ್ಯಾ ಯುದ್ಧ ಆರಂಭವಾಗಿ ನಾಲ್ಕು ತಿಂಗಳು ಕಳೆದಿದೆ. ಆದರೆ, ಯುದ್ಧ ನಿಂತಿಲ್ಲ. ಇತ್ತ ಯೂಕ್ರೇನ್​ನಿಂದ ದೇಶಕ್ಕೆ ವಾಪಸಾದ ವೈದ್ಯಕಿಯ ವಿದ್ಯಾಥಿರ್ಗಳ ಪರದಾಟ ನಿಂತಿಲ್ಲ. ಅಂದಾಜು 24,000 ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದ್ದು, ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.
ಯೂಕ್ರೇನ್​ನಿಂದ ಕರ್ನಾಟಕ ಹಾಗೂ ವಿವಿಧ ರಾಜ್ಯಗಳಿಗೆ ಆಗಮಿಸಿದ ಎಂಬಿಬಿಎಸ್​ ವಿದ್ಯಾರ್ಥಿಗಳಿಗೆ ಸರ್ಕಾರ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಇದುವರೆಗೂ ಕಲ್ಪಿಸಿಲ್ಲ.
ವೈದ್ಯಕೀಯ ಆಯೋಗದ ವರ್ಗಾವಣೆ ನೀತಿಯಿಂದಾಗಿ ಇತ್ತ ಬೇರೆಡೆ ವ್ಯಾಸಂಗ ಮಾಡಲು ಆಗದೆ, ಅತ್ತ ಯೂಕ್ರೇನ್​ಗೂ ಮತ್ತೆ ವಾಪಸಾಗಲು ಸಾಧ್ಯವಾಗದೆ ವಿದ್ಯಾಥಿರ್ಗಳು ಕಂಗಾಲಾಗಿದ್ದಾರೆ. ಆಪರೇಷನ್​ ಗಂಗಾ ನಡೆಸಿ ಭಾರತಕ್ಕೆ ವಿದ್ಯಾರ್ಥಿಗಳನ್ನು ಬರಮಾಡಿಕೊಂಡ ಕೇಂದ್ರ ಸರ್ಕಾರ ಅವರ ಭವಿಷ್ಯಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು. ಆದರೆ, ಆ ಮಾತು ಭರವಸೆಯಾಗಿಯೇ ಉಳಿದಿದೆ.
ಅತ್ತ ಉಕ್ರೇನ್​ಗೆ ಮರಳಲು ಇನ್ನೂ ಯುದ್ಧ ನಿಂತಿಲ್ಲ. ಇತ್ತ ಸರ್ಕಾರ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದ ವಿದ್ಯಾಥಿರ್ಗಳು ಆತಂಕಕ್ಕೆ ಒಳಗಾಗಿದ್ದಾರೆ. ಕಾರ್ಕೀವ್​ ನ್ಯಾಷನಲ್​ ಮೆಡಿಕಲ್​ ಯೂನಿವರ್ಸಿಟಿ, ಕೀವ್​ ನ್ಯಾಷನಲ್​ ಮೆಡಿಕಲ್​ ಯೂನಿವರ್ಸಿಟಿ, ವಿ.ಎನ್​. ಕಾಜಿರ್ನ್​ ನ್ಯಾಷನಲ್​ ಯೂನಿವರ್ಸಿಟಿ ಸೇರಿದಂತೆ ಯೂಕ್ರೇನ್​ನ ಹತ್ತಾರು ವೈದ್ಯಕಿಯ ಕಾಲೇಜುಗಳಲ್ಲಿ ಭಾರತೀಯ ವಿದ್ಯಾಥಿರ್ಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿವಿಗಳು ಈಗಾಗಲೇ ಆನ್​ಲೈನ್​ ತರಗತಿಗಳನ್ನು ಆರಂಭಿಸಿವೆ. ಆನ್​ಲೈನ್​ನಲ್ಲೇ ಪರೀಕ್ಷೆ ನಡೆಸಲು ಮುಂದಾಗಿವೆ. ಎಲ್ಲ ಸಮಸ್ಯೆ ಬಗೆಹರಿಸುತ್ತೇವೆ. ವಾಪಸ್​ ಬನ್ನಿ ಎಂದು ಮನವಿ ಮಾಡುತ್ತಿವೆ. ಕೆಲ ವಿವಿಗಳು ಮುಂದಿನ ವರ್ಷದ ಶುಲ್ಕ ಭರಿಸುವಂತೆ ಸಂದೇಶ ರವಾನಿಸುತ್ತಿವೆ. ಆದರೆ ವಿದ್ಯಾಥಿರ್ಗಳಲ್ಲಿ ಆತಂಕ ದೂರವಾಗಿಲ್ಲ.

ಸಮಸ್ಯೆಗೆ ಕಾರಣವೇನು?: ಒಂದು ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದ ವೈದ್ಯಕಿಯ ವಿದ್ಯಾಥಿರ್ಗಳು ಮತ್ತೊಂದು ವಿಶ್ವವಿದ್ಯಾಲಯಕ್ಕೆ ವರ್ಗಾವಣೆ ಪಡೆಯಲು ಅನುಮತಿ ಇಲ್ಲದ ಕಾರಣ ಯೂಕ್ರೇನ್​ನಿಂದ ಬೇರೆಡೆ ಹೋಗಲು ಸಾಧ್ಯವಾಗುತ್ತಿಲ್ಲ. ಇತ್ತ ನಮ್ಮ ದೇಶದಲ್ಲಿಯೂ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗುತ್ತಿಲ್ಲ.

ಲಕ್ಷಾಂತರ ರೂ. ಸಾಲ ಮಾಡಿ ವಿದ್ಯಾಭ್ಯಾಸಕ್ಕಾಗಿ ಯೂಕ್ರೇನ್​ಗೆ ಹೋಗಿದ್ದೆವು. ಅಲ್ಲಿ ಯುದ್ಧ ಇನ್ನೂ ನಿಂತಿಲ್ಲ. ಮುಂದಿನ ವಿದ್ಯಾಭ್ಯಾಸ ಹೇಗೆ ಎಂಬ ಚಿಂತೆ ಕಾಡುತ್ತಿದೆ. ಸರ್ಕಾರ ಶ್ರೀವೇ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು. ಚೈತ್ರಾ ಸಂಶಿ, ಕುಂದಗೋಳ (ಯೂಕ್ರೇನ್​ನಿಂದ ವಾಪಸಾದ ವೈದ್ಯಕೀಯ ವಿದ್ಯಾರ್ಥಿನಿ)
ಇದಕ್ಕೆ ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಹಾಗೂ ಅಧಿಕಾರಿಗಳ ಜತೆಗೆ ಮಾತನಾಡುತ್ತೇನೆ. ಯೂಕ್ರೇನ್​ನಿಂದ ವಾಪಸಾದ ವೈದ್ಯಕಿಯ ವಿದ್ಯಾಥಿರ್ಗಳ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪ್ರಲ್ಹಾದ ಜೋಶಿ, ಕೇಂದ್ರ ಸಚಿವ