ಹುಬ್ಬಳ್ಳಿ: ಕನ್ನಡ ಫಿಲಂ ಚೇಂಬರ್ ನೀಡುವ ಯುವರತ್ನ ಪ್ರಶಸ್ತಿಗೆ ಹುಬ್ಬಳ್ಳಿಯ ಬಾಲ ಕಲಾವಿದ ಅವನೀಶ ನೀಲಗುಂದ ಆಯ್ಕೆಯಾಗಿದ್ದಾನೆ.
ಮಾ.23ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅವನೀಶಗೆ ಯುವರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಚೇಂಬರ್ನ ಅಧ್ಯಕ್ಷ ಎಂ.ಎಸ್. ರವೀಂದ್ರ ತಿಳಿಸಿದ್ದಾರೆ. 7 ವರ್ಷದ ಅವನೀಶ ಹು-ಧಾ ಮಹಾನಗರ ಪಾಲಿಕೆ, ಧಾರವಾಡ ಜಂಬೂ ಸವಾರಿ ಉತ್ಸವ, ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸ್ವದೇಶಿ ಮೇಳ, ಸೇರಿ 75ಕ್ಕೂ ಹೆಚ್ಚು ವೇದಿಕೆಗಳಲ್ಲಿ ಕಲಾ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾನೆ.