ಜಿಲ್ಲೆ

ಯುವಪೀಳಿಗೆಗೆ ಕೆಂಪೇಗೌಡರ ವ್ಯಕ್ತಿತ್ವ ಸ್ಫೂರ್ತಿ, ಕೃಷಿ ವಿವಿ ವಿಶ್ರಾಂತ ಕುಲಪತಿ ನಾರಾಯಣಗೌಡ ಅಭಿಮತ

ನೆಲಮಂಗಲ: ನಾಡಪ್ರಭು ಕೆಂಪೇಗೌಡರ ವ್ಯಕ್ತಿತ್ವ ಹಾಗೂ ಕೊಡುಗೆಗಳು ಯುವಪೀಳಿಗೆಗೆ ಸ್ಫೂರ್ತಿಯಾಗಿವೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ನಾರಾಯಣಗೌಡ ಅಭಿಪ್ರಾಯಪಟ್ಟರು.

ನಗರದ ವಿನಾಯಕನಗರ ಸರ್ಕಾರಿ ನೌಕರರ ಸಭಾಂಗಣದಲ್ಲಿ ಶನಿವಾರ ರಂಗಶಿಕ್ಷಣ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೆಂಪೇಗೌಡ ಇತಿಹಾಸ ನಾಟಕ ಕೃತಿ ಪರಿಚಯ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಂಪೇಗೌಡರ ವಿಚಾರಧಾರೆಗಳು ವಿಶಾಲ ಹಾಗೂ ಮೌಲ್ಯಗಳಿಂದ ಕೂಡಿದ್ದು, ನಾಟಕದ ಮೂಲಕ ಕೆಂಪೇಗೌಡ ಇತಿಹಾಸ ಜನಸಾವಾನ್ಯರಿಗೆ ಅರ್ಥ ವಾಡಿಸುವ ಪ್ರಯತ್ನ ಮಾಡಲಾಗಿದೆ. ಸಂತ ಜೋಸ್ೆ 500 ವರ್ಷಗಳಲ್ಲಿ 200 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ್ದಾರೆ. ಆದರೆ, ಒಕ್ಕಲಿಗರ ಸಂ ಸ್ಥಾಪನೆಗೊಂಡು ಶತವಾನಗಳೇ ಕಳೆದರೂ ಒಂದು ವಿವಿ ನಿರ್ಮಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಶ್ರೀ ಕೆಂಪೇಗೌಡ ನಾಟಕದ ರಚನಕಾರ ಪ್ರೊ.ನಾರಾಯಣಟ್ಟ ವಾತನಾಡಿ, ನಾಡಪ್ರಭು ಕೆಂಪೇಗೌಡರ ಹುಟ್ಟು ವಂಶಾವಳಿ ಕುರಿತಾಗಿ ಅನೇಕ ಪುಸ್ತಕ ರಚನೆಯಾಗಿದ್ದರೂ ಕೆಲ ತಪ್ಪು ಕಲ್ಪನೆಗಳು ಇಂದಿಗೂ ಸವಾಜದಲ್ಲಿವೆ. ಇದನ್ನು ಮನಗಂಡು ಇತಿಹಾಸದಲ್ಲಿರುವ ಸತ್ಯ ಸಂಗತಿಗಳನ್ನು ದಾಖಲೆ ಸಹಿತ ಸವಾಜಕ್ಕೆ ಅರ್ಥ ವಾಡಿಸುವ ಉದ್ದೇಶದಿಂದ ನಾಟಕ ರಚಿಸಲಾಗಿದೆ ಎಂದರು.

ರಾಜರು, ಮಹನೀಯರನ್ನು ಜಾತಿಗೆ ಸೀಮಿತ ವಾಡಲಾಗುತ್ತಿದೆ. ಕೇವಲ ಓದು, ಉದ್ಯೋಗ ಹಣ ಸಂಪಾದನೆಗೆ ಯುವಪೀಳಿಗೆ ಮೇಲೆ ಒತ್ತಡ ಹೇರಲಾಗುತ್ತಿದೆ. ಜನಾಂಗದ ಹಿಂದಿರುವ ಪರಂಪರೆ ಅರಿಯುವ ಪ್ರಯತ್ನವಾಗುತ್ತಿಲ್ಲ. ಇತಿಹಾಸದ ಕಥೆಗಳುಳ್ಳ ನಾಟಕಗಳ ಪ್ರದರ್ಶನ ವಾಡಿದಲ್ಲಿ ಸಂಸಂಸ್ಕೃತಿ ಕಲೆಯಾದರೂ ಉಳಿಯಲಿವೆ ಎಂದು ಭಾರತೀಯ ಕಿಸಾನ್ ಸಂದ ಪ್ರಧಾನ ಕಾರ್ಯದರ್ಶಿ ಕಾಸರಟ್ಟ ಗಂಗಾಧರ್ ಹೇಳಿದರು.

ತಾಲೂಕು ಬಿಜೆಪಿ ಘಟಕದ ಉಪಾಧ್ಯಕ್ಷ ಜಗದೀಶ್ ಚೌಧರಿ, ನಗರಸಭೆ ಸದಸ್ಯ ಆಂಜಿನಮೂರ್ತಿ, ತಾಲೂಕು ಸರ್ಕಾರಿ ನೌಕರರ ಸಂದ ಅಧ್ಯಕ್ಷ ಟಿ.ವಾಸುದೇವಮೂರ್ತಿ, ರೋಟರಿ ಸಂಸ್ಥಾಪಕ ಅಧ್ಯಕ್ಷ ಎಚ್.ಜಿ.ರಾಜು, ತಾಲೂಕು ಒಕ್ಕಲಿಗರ ಸಂದ ಅಧ್ಯಕ್ಷ ಬಿ.ಕೆ.ತಿಮ್ಮರಾಜು, ತಾಲೂಕು ಕಸಾಪ ಅಧ್ಯಕ್ಷ ಪ್ರದೀಪ್, ಕಲಾವಿದ ಪ್ರಕಾಶ್‌ಮೂರ್ತಿ, ಚಿಕ್ಕವಾರನಹಳ್ಳಿದಿನೇಶ್ ಇತರರು ಇದ್ದರು.