ಅರಕಲಗೂಡು: ಇಂದಿನ ಯುವ ಪೀಳಿಗೆಯವರು ಚಿಕ್ಕ ವಯಸ್ಸಿನಿಂದಲೇ ದುಶ್ಚಟಗಳಿಗೆ ಬಲಿಯಾಗಿ ಕುಟುಂಬದ ನೆಮ್ಮದಿ ಕಳೆದುಕೊಳ್ಳುತ್ತಿರುವುದು ಕಳವಳಕಾರಿ ಸಂಗತಿ ಎಂದು ಕೆಸವತ್ತೂರು ವಿರಕ್ತ ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ರಾಮನಾಥಪುರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಮದ್ಯವರ್ಜನ ಶಿಬಿರಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿ, ಬದುಕು ಕಟ್ಟಿಕೊಳ್ಳಲು ದುಶ್ಚಟಗಳನ್ನು ದೂರ ಮಾಡಿ ಸಂಸಾರವನ್ನು ಗೌರವಯುತವಾಗಿ ಸಾಗಿಸಿ ಸಮಾಜದಲ್ಲಿ ಉತ್ತಮರಾಗಿ ನಡೆದುಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮುಖಂಡರಾದ ನರಸಿಂಹಮೂರ್ತಿ, ಲೋಕೇಶ್, ವಿರೂಪಾಕ್ಷ, ಕಾಳಬೋಯಿ, ಶ್ರೀನಿವಾಸ್ ಇತರರಿದ್ದರು.