ಯುವನಿಽ ಯೋಜನೆ ಹೆಚ್ಚಿನ ಮಾಹಿತಿ ನೀಡುವ ಹಿನ್ನಲೆಯಲ್ಲಿ ಒಂದು ತಿಂಗಳು ಕಾಲ ನಡೆಯುವ ವಿಶೇಷ ಅಭಿಯಾನದ ಯುವನಿಽ ಪೋಸ್ಟರ್‌ನ್ನು ಬಾಗಲಕೋಟೆಯಲ್ಲಿ ಇತ್ತೀಚಿಗೆ ಜಿಲ್ಲಾಽಕಾರಿ ಸಂಗಪ್ಪ ಎಂ. ಬಿಡುಗಡೆ ಮಾಡಿದರು. ಜಿಪಂ ಸಿಇಒ ಶಶಿಧರ ಕುರೇರ ಮತ್ತಿತರರು ಅಽಕಾರಿಗಳು ಇದ್ದರು. 
ಜಿಲ್ಲೆ

ಯುವನಿಧಿ ಪೋಸ್ಟರ್ ಬಿಡುಗಡೆ

ಸಂತೋಷ ದೇಶಪಾಂಡೆ

ಬಾಗಲಕೋಟೆ : ಯುವನಿಧಿ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಅಭ್ಯರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಜುಲೈ ೦೭ ರಿಂದ ಅಗಸ್ಟ್ ೦೭ ರವರೆಗೆ ವಿಶೇಷ ನೋಂದಣಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಿಲ್ಲಾಧಿಕಾರಿ ಸಂಗಪ್ಪ ಅವರ ಸಮ್ಮುಖದಲ್ಲಿ ಇತ್ತೀಚಿಗೆ ಯುವನಿಧಿ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

ಜಿಲ್ಲೆಯಲ್ಲಿ ಜೂನ್ ೨೦೨೫ ರವರೆಗೆ ೧೫೭೦೦ ಅಭ್ಯರ್ಥಿಗಳು ಯುವನಿಽ ಯೋಜನೆಗೆ ನೋಂದಾಯಿಸಿಕೊAಡಿದ್ದು, ೧೩೧೭೯ ಪದವೀಧರರು ಹಾಗೂ ೧೬೬ ಡಿಪ್ಲೋಮಾ ಅಭ್ಯರ್ಥಿಗಳು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಮೇ ೨೦೨೫ರ ವರೆಗೆ ೨೫.೭೦ ಕೋಟಿ ಹಣ ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ, ಉದ್ಯೋಗಾಧಿಕಾರಿಗಳು ಹಾಗೂ ಇನ್ನಿತರ ಇಲಾಖೆಗಳ ಅಽಕಾರಿಗಳು ಉಪಸ್ಥಿತರಿದ್ದರು.