ಜಿಲ್ಲೆ

ಯುವತಿ ವೈದ್ಯಕೀಯ ಚಿಕಿತ್ಸೆಗೆ ಒಂದು ಲಕ್ಷ ರೂ. ನೆರವು

ಸಂತೋಷ ದೇಶಪಾಂಡೆ

ಬಾಗಲಕೋಟೆ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರರಕಣದಲ್ಲಿ ಯುವತಿಗೆ ವೈದ್ಯಕೀಯ ಚಿಕಿತ್ಸೆಗೆ ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಒಂದು ಲಕ್ಷ ರೂ. ನೆರವು ನೀಡಿದ್ದಾರೆ.

ಇಳಕಲ್ಲ ತಾಲೂಕಿನ ಗುಡೂರ ಗ್ರಾಮದಲ್ಲಿ ಯುವತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿತ್ತು. ತಂದೆ-ತಾಯಿ ಇಲ್ಲದೇ ತಗಡಿನ ಶೆಡ್‌ನಲ್ಲಿ ವಾಸಿಸುತ್ತಿದ್ದ ಯುವತಿ, ಸದ್ಯ ಇಳಕಲ್ಲ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದು, ಗುರುವಾರ ಸಾಂತ್ವಾನ ಕೇಂದ್ರಕ್ಕೆ ತೆರಳಿದ ಸ್ವಾಮೀಜಿ, ಒಂದು ಲಕ್ಷ ರೂ.ಗಳ ಚೆಕ್ ನೀಡಿ ವೈದ್ಯಕೀಯ ಚಿಕಿತ್ಸೆಗೆ ನೆರವಾದರು.

ತಂಗಡಗಿಯ ಹಡಪದ ಅಪ್ಪಣ್ಣ ಗುರುಪೀಠದ ಜಗದ್ಗುರು ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ, ತೆಲಸಂಗ ಕುಂಬಾರ ಗುರುಪೀಠದ ಜಗದ್ಗುರು ಕುಂಬಾರ ಗುಂಡಯ್ಯ ಸ್ವಾಮೀಜಿ, ಶಿಕಾರಿಪುರ ವಿರಕ್ತಮಠದ ಚನ್ನಬಸವ ಸ್ವಾಮೀಜಿ, ಭಾರತೀಯ ರೈಲ್ವೆ ಪ್ರಾಽಕಾರದ ಸದಸ್ಯ ಅಶೋಕ ಲಿಂಬಾವಳಿ, ಬಿಜೆಪಿ ಪರಿಶಿಷ್ಟ ಜಾತಿಯ ರಾಜ್ಯ ಕಾರ್ಯದರ್ಶಿ ಓಂಕಾರೇಶ್ವರ, ವಕೀಲ ಕುಮರಸ್ವಾಮಿ ಹಿರೇಮಠ, ಹನುಮಂತ ತುಂಬದ, ಬಸವರಾಜ ಒಡೆಯರಾಜ, ರಾಘವೇಂದ್ರ ಚಿಂಚಲಿ ಮತ್ತಿತರರು ಇದ್ದರು.