ಜಿಲ್ಲೆ

ಯುವಜನರಿಗೆ ವಿದೇಶಿ ಉದ್ಯೋಗಕ್ಕೆ ಕ್ರಮ

ಚಿತ್ರದುರ್ಗ: ರಾಜ್ಯ ಸರ್ಕಾರದ ಯೋಜನೆಯಿಂದಾಗಿ ಆರ್ಥಿಕವಾಗಿ ಹಿಂದುಳಿದ ಯುವಜನರು ವಿದೇಶ ಉದ್ಯೋಗ ಪಡೆದುಕೊಂಡಿದ್ದಾರೆ ಎಂದು ಕೌಶಲಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ,ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯುಕ್ತೆ ಎಂ.ಕನಗವಲ್ಲಿ ಅವರು ಹೇಳಿದರು.
ನಗರದ ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ ಕಚೇರಿ,ನಗರದ ಕೇಂದ್ರ ಗ್ರಂಥಾಲಯಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು,
ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್‌ಪಾಟೀಲ್ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಯುವಜನರಿಗೆ ವಿದೇಶಗಳಲ್ಲಿ ಉದ್ಯೋಗ ಒದಗಿ ಸುವ ಮಹತ್ವದ ಯೋಜನೆಯನ್ನು ನಿಗಮದಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಕಳೆದ ಎರಡು ತಿಂಗಳಲ್ಲಿ 150ಕ್ಕೂ ಹೆಚ್ಚು ವಿವಿಧ ದೇಶಗಳಿಗೆ ಉದ್ಯೋಗಕ್ಕೆ ಆಯ್ಕೆಯಾಗಿ ತೆರಳಿದ್ದಾರೆ.
ಐಟಿಐ,ಡಿಪ್ಲೊಮಾ ಮತ್ತಿತರ ವೃತ್ತಿಪರ ಕೋರ್ಸ್‌ಗಳನ್ನು ಅಧ್ಯಯನ ಮಾಡಿದ ಅಭ್ಯರ್ಥಿಗಳ ಉತ್ತಮ ಭವಿಷ್ಯಕ್ಕೆ ನಿಗಮ ಕ್ರಮ ತೆಗೆದುಕೊಂಡಿ ದೆ. ಈವರೆಗೆ ಒಂದು ಸಾವಿರಕ್ಕೂ ಹೆಚ್ಚು ಯುವಜನರು ವಿದೇಶಗಳಲ್ಲಿ ಉದ್ಯೋಗ ಪಡೆದಿದ್ದಾರೆ. ಇದಕ್ಕಾಗಿ ಉತ್ತಮ ಕೌಶಲ ತರಬೇತಿ ನೀಡ ಲಾಗುತ್ತಿದೆ ಎಂದರು.
ಗ್ರಂಥಾಲಯದ ವಿವಿಧ ವಿಭಾಗಗಳನ್ನು ಪರಿಶೀಲಿಸಿದ ಅವರು,ಓದುಗರಿಗೆ ಉತ್ತಮ ವಾತಾವರಣವಿರಬೇಕು. ಓದುಗರ ಆಸಕ್ತಿಗನುಗುಣವಾಗಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ಗ್ರಂಥಾಲಯದಲ್ಲಿ ಲಭ್ಯವಿರಬೇಕೆಂದರು. ನಗರದ ಕೆಎಚ್‌ಬಿ ಕಾಲನಿ ಗ್ರಂಥಾಲಯ ದಕ್ಕೆ ಮೀಸಲಿರುವ ನಿವೇಶನ,ಕೆ.ಬಳ್ಳೇಕಟ್ಟೆ ಬಳಿಯ ಬಿದರೆಕೆರೆ ಹತ್ತಿರ ಕೌಶಲಾಭಿವೃದ್ಧಿ ಇಲಾಖೆಗೆ ಸೇರಿದ 45.13 ಎಕರೆ ವಿಸ್ತೀರ್ಣದ ಭೂಮಿಗೆ 1.98 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ ಕಾಂಪೌಂಡ್ ಕಾಮಗಾರಿ ಪರಿಶೀಲಿಸಿದರು.
ಕೌಶಲಾಭಿವೃದ್ಧಿ ಇಲಾಖೆ ಜಿಲ್ಲಾ ಅಧಿಕಾರಿ ಟಿ.ವೇಮಣ್ಣ,ಮುಖ್ಯಗ್ರಂಥಾಲಯಾಧಿಕಾರಿಗಳಾದ ಸುಮಾಕೋಡಿಹಳ್ಳಿ,ಬಸವರಾಜ್‌ಕೊಳ್ಳಿ,ಗ್ರಂಥಾ ಲಯ ಇಲಾಖೆ ದಾವಣಗೆರೆ ಜಿಲ್ಲಾ ಉಪ ನಿರ್ದೇಶಕ ಪಿ.ಆರ್.ತಿಪ್ಪೇಸ್ವಾಮಿ ಮತ್ತಿತರರು ಇದ್ದರು.