ಶೆಟ್ಟಿಕೊಪ್ಪದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಸಿದ್ಧಿವಿನಾಯಕ ಸೇವಾ ಸಮಿತಿ ಅಧ್ಯಕ್ಷ ಎಂ.ಎಲ್.ಪ್ರಾಣೇಶ್, ಎನ್.ಎಂ.ಕಾಂತರಾಜ್, ಎ.ಬಿ.ಮಂಜುನಾಥ್, ಸುನೀಲ್‌ಕುಮಾರ್, ಶೈಲಾ, ವಾಣಿ, ಪೂರ್ಣಿಮಾ, ಅನೂಪಕುಮಾರ್, ಜಗದೀಶ್ ಇತರರಿದ್ದರು.  
ಜಿಲ್ಲೆ

ಯುವಜನರಿಗೆ ಇತಿಹಾಸ ತಿಳಿಸಬೇಕು

ಎಸ್.ಎನ್.ರವೀಂದ್ರ

ಎನ್.ಆರ್.ಪುರ: ಕನ್ನಡ ಭಾಷೆ, ಸಂಸ್ಕೃತಿ, ಕಲೆಯ ಇತಿಹಾಸವನ್ನು ಯುವ ಪೀಳಿಗೆಗೆ ತಿಳಿಸಬೇಕಾದ ಅನಿವಾರ್ಯತೆ ಇದೆ ಎಂದು ಶೆಟ್ಟಿಕೊಪ್ಪ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ಅಧ್ಯಕ್ಷ ಎಂ.ಎಲ್.ಪ್ರಾಣೇಶ್ ಹೇಳಿದರು

ಶೆಟ್ಟಿಕೊಪ್ಪದಲ್ಲಿ 69ನೇ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ಜಗತ್ತಿನಲ್ಲಿ ಕನ್ನಡ ಭಾಷೆ 30ನೇ ಸ್ಥಾನ ಪಡೆದಿದೆ. 2011ರಲ್ಲಿ ಜಗತ್ತಿನಲ್ಲಿ 43 ಮಿಲಿಯನ್ ಜನರು ಕನ್ನಡ ಮಾತನಾಡುವವರು ಇದ್ದರು. ಈಗ 56 ಮಿಲಿಯನ್ ಜನರು ಕನ್ನಡ ಮಾತನಾಡುತ್ತಿದ್ದಾರೆ. ದಕ್ಷಿಣ ಭಾಗದ ರಾಜ್ಯಗಳಲ್ಲಿಯೇ ಕರ್ನಾಟಕ ಹೊಂದಿರುವ ವಿಸ್ತೀರ್ಣದಲ್ಲಿ 6ನೇ ಸ್ಥಾನದಲ್ಲಿದೆ. ಕನ್ನಡವನ್ನು ಬಳಸಿ ಬೆಳೆಸಬೇಕೆಂದು ಹೇಳಿದರು.

ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಎನ್.ಎಂ.ಕಾಂತರಾಜ್ ಮಾತನಾಡಿ, ಕನ್ನಡ ನಮ್ಮೆಲ್ಲರ ಜೀವನದ ಭಾಷೆಯಾಗಿದೆ. ಇಂಥ ಭಾಷೆಯನ್ನು ಎಲ್ಲರೂ ಗೌರವಿಸಬೇಕು ಎಂದು ತಿಳಿಸಿದರು.

ಕಡಹಿನಬೈಲು ಗ್ರಾಪಂ ಸದಸ್ಯ ಎ.ಬಿ.ಮಂಜುನಾಥ್ ಮಾತನಾಡಿ, ನಾಡಿನ ಎಲ್ಲ ಜನರೂ ರಾಜ್ಯೋತ್ಸವ ಆಚರಿಸಬೇಕು. ಈ ಮೂಲಕ ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯಕ್ಕೆ ಗೌರವ ನೀಡಬೇಕು ಎಂದು ಹೇಳಿದರು.

ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್, ಸದಸ್ಯರಾದ ಶೈಲಾ ಮಹೇಶ್, ವಾಣಿ ನರೇಂದ್ರ, ಪೂರ್ಣಿಮಾ ಸಂತೋಷ್, ಜಗದೀಶ, ಅಶ್ಬಕ್, ಅನೂಪಕುಮಾರ್, ಉಮೇಶ್, ಧರ್ಮಯ್ಯ, ಮಲ್ಲಿಕಾರ್ಜುನ, ಶುಭಾ, ಮಣಿ, ಎಸ್.ವಿ.ಗಾಯತ್ರಿ ಇತರರಿದ್ದರು.