ಜಿಲ್ಲೆ

ಯುವಜನತೆ ಎಚ್ಚರಿಸಲು ಜಾಗೃತಿ ಜಾಥಾ

ತುಮಕೂರು: ಮಾದಕ ವ್ಯಸನದಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶ್ರೀ ಸಿದ್ಧಾರ್ಥ ವೈದ್ಯಕಿಯ ಮಹಾವಿದ್ಯಾಲಯದ ನರ್ಸಿಂಗ್​ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಬುಧವಾರ ಜಾಥಾ ಹಮ್ಮಿಕೊಂಡಿದ್ದರು. ಈ ವೇಳೆ ಯುವಜನತೆಯನ್ನು ಎಚ್ಚೆತ್ತಿಸುವ

ನಿಟ್ಟಿನಲ್ಲಿ ವಿವಿಧ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು.

ನಗರದ ಟೌನ್​ ಹಾಲ್​ ವೃತ್ತದಿಂದ ನರ್ಸಿಂಗ್​ ವಿದ್ಯಾರ್ಥಿಗಳು, ಯುವಕರೇ ಎಚ್ಚೆತ್ತುಕೊಳ್ಳಿ ಮದ್ಯಪಾನ, ಧೂಮಪಾನದ ದಾಸರಾಗಬೇಡಿ ಮಾದಕ ವ್ಯಸನಕ್ಕೆ ಒಳಗಾಗಬೇಡಿ ಎಂದು ಘೋಷಣೆ, ವಿವಿಧ ಭಿತ್ತಿಪತ್ರಗಳನ್ನು ಹಿಡಿದು ನಗರದ ಚರ್ಚ್​ ಸರ್ಕಲ್​ ಮೂಲಕ ದೇವರಾಜು ಅರಸು ಸರ್ಕಾರಿ ಬಸ್​ ರ್ಟಮಿನಲ್​ವರೆಗೆ ಜಾಗೃತಿ ಜಾಥಾ ನಡೆಸಿದರು. ನಂತರ ಬಸ್​ ನಿಲ್ದಾಣ ಮುಂಭಾಗ ಜನರನ್ನು ಸೆಳೆಯಲು ನೃತ್ಯ ಹಾಗೂ ನಾಟಕ ಪ್ರದರ್ಶಿಸಿ ಮಾದಕ ವ್ಯಸನದಿಂದ ಉಂಟಾಗುವ

ದುಷ್ಪರಿಣಾಮದ ಬಗ್ಗೆ ಯುವ ನಾಂಗ ಎತ್ತ ಸಾಗುತ್ತಿದೆ, ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದರ ಕುರಿತು ಅರಿವು ಮೂಡಿಸಿದರು.

ನರ್ಸಿಂಗ್​ ವಿಭಾಗದ ಮುಖ್ಯ ಉಪನ್ಯಾಸಕಿ ಮೂರ್ಸಿ ದೇವಪ್ರಿಯಾ ಮಾತನಾಡಿ, ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣಿ ಕಾನೂನುಬಾಹಿರ ಚಟುವಟಿಕೆ ಎಂಬ ಅರಿವಿದ್ದರು ಯುವಕರು ಈ ಚಟುವಟಿಕೆಗಳಲ್ಲಿ ಭಾಗಿಗಳಾಗುತ್ತಿರುವುದು ಆತಂಕಕಾರಿ ಎನಿಸಿದೆ. ಸರ್ಕಾರಗಳು ಎಷ್ಟೇ ಸೂಕ್ತ ಕ್ರಮಗಳನ್ನು ಕೈಗೊಂಡರು ಯುವ ಸಮೂಹ ಮಾದಕ ಸೇವನೆಯ ದಾಸರಾಗುತ್ತಿದ್ದಾರೆ ಇದರಿಂದ ಯುವ ಸಮೂಹವನ್ನ ಕಾಪಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು. ನರ್ಸಿಂಗ್​ ವಿಭಾಗದ ಉಪನ್ಯಾಸಕಿ ಶಿಲ್ಪಾ, ಚೇತನ್​, ಅನುಪಮ,

ಗಗನಾ, ಶ್ವೇತಾ ಸೇರಿದಂತೆ ಇತರರು ಜಾಥಾದ ನೇತೃತ್ವವಹಿಸಿದ್ದರು.