ಕಲಬುರಗಿ: ಕರ್ನಾಟಕದಲ್ಲಿ 1.80 ಕೋಟಿ ಯುವ ಜನರಿದ್ದು, ಸರ್ವತೋಮುಖ ಬೆಳವಣಿಗೆಗೆ ರಾಜ್ಯದಲ್ಲಿ ಯುವಜನ ಸಬಲೀಕರಣ ನಿಗಮ ಸ್ಥಾಪನೆ ಅಗತ್ಯ ಎಂದು ವಿಶ್ವ ಹಿಂದು ಕಾಲೇಜಿನ ಪ್ರಾಂಶುಪಾಲ ಡಾ. ಆರ್.ಐ.ದರ್ಗಾ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂವಾದ ಯುವ ಸಂಪನ್ಮೂಲ ಕೇಂದ್ರ, ಯುವ ಮುನ್ನಡೆ ಕಲಬುರಗಿ ಹಾಗೂ ರೇಶ್ಮಿ ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಯುವಜನ ಸಬಲೀಕರಣ ನಿಗಮ ಸ್ಥಾಪನೆಗಾಗಿ ಯುವಾಂದೋಲನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ವಿಶೇಷತೆ ಇದ್ದೇ ಇರುತ್ತದೆ. ಆ ವಿಶೇಷತೆ ಗುರುತಿಸಿ ಹೊರತರಲು ವಿದ್ಯಾಥರ್ಿ ಯುವಜನರನ್ನು ಹುಡುಕಾಟಕ್ಕೆ ಹಚ್ಚುವಂತಹ ಭಿನ್ನ ಕಾರ್ಯಕ್ರಮಗಳನ್ನು ರೂಪಿಸಬೇಕಾಗುತ್ತದೆ. ಅದಕ್ಕೆಲ್ಲ ಒಂದು ಸಾಂಸ್ಥಿಕ ರೂಪ ಅಗತ್ಯವಾಗಿದೆ ಎಂದರು.
ಯುವಜನರು ದೇಶದ ಸಂಪತ್ತು ಎಂಬ ಮಾತನ್ನು ರಾಜಕಾರಣಿಗಳು ಕೇವಲ ಭಾಷಣಗಳಿಗೆ ಸೀಮಿತಗೊಳಿಸಿ ರಾಜ್ಯದ ಯುವ ಜನತೆಯೊಳಗಿನ ಅಂತ ಸತ್ವವನ್ನು ಹೆಚ್ಚಿಸುವಲ್ಲಿ ಹಿಂದೇಟು ಹಾಕುತ್ತಿರುವುದಕ್ಕೆ ಕನ್ನಡ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಸ್ತಾವಿಕ ಮಾತನಾಡಿದ ಸಂವಾದ ಯುವ ಸಂಪನ್ಮೂಲ ಕೇಂದ್ರದ ಸಂಯೋಜಕಿ ರುಕ್ಮಿಣಿ ನಾಗಣ್ಣವರ, 15 ರಿಂದ 29ನೇ ವಯಸ್ಸನ್ನು ಯುವಪರ್ವ ಎಂದು ಕರೆಯುತ್ತೇವೆ. ಯುವಜನರ ಹೊಸ ಕನಸು, ಆಸೆ, ಗೊಂದಲ, ಸಮಸ್ಯೆ, ಸಾಹಸ, ಓದು, ಉದ್ಯೋಗಗಳಿಗೆ ಮೀಸಲು. ಅವರ ಅಭಿವೃದ್ಧಿಗೆ ಸಕರ್ಾರ ಸಬಲೀಕರಣ ನಿಗಮ ಸ್ಥಾಪಿಸಬೇಕಿದೆ. ಆ ನಿಟ್ಟಿನಲ್ಲಿ ಕಲಬುರಗಿಯ ಜಿಲ್ಲೆಯಾದ್ಯಂತ ಯುವಾಂದೋಲನ ಕಾರ್ಯಕ್ರಮವನ್ನು ಫೆಬ್ರುವರಿ ತಿಂಗಳಾದ್ಯಂತ ವಿವಿಧ ಕಾಲೇಜು ಮತ್ತು ವಸತಿ ನಿಲಯಗಳಲ್ಲಿ ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ಯುವ ಮುನ್ನಡೆಯ ಮುಂದಾಳು ರಮಾ ದೊಡ್ಡಮನಿ ಸಂವಾದ ಸಂಸ್ಥೆಯ ಪರಿಚಯ ಮಾಡಿದರು. ಬಿನಿತಾ, ನೇಹಾ, ಪೂಜಾ, ಮಧುಸೂದನ್, ಕಾಶೀನಾಥ, ಮಲ್ಲಿಕಾಜರ್ುನ, ಸಾಬಮ್ಮ ಮತ್ತು ಸುನೀಲ ಸಂವಾದ ನಡೆಸಿದರು.
ರೇಶ್ಮಿ ಪದವಿ ಕಾಲೇಜಿನ ಪ್ರಾಂಶುಪಾಲರು ಶೈಲಜಾ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಾಗೇಶ ಹೇರೂರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಸಿಬ್ಬಂದಿ, ವಿದ್ಯಾಥರ್ಿಗಳಿದ್ದರು.