???????????????????????????????????? 
ಜಿಲ್ಲೆ

ಯುವಕರು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲಿ

ಪಾಂಡವಪುರ: ಹೈನುಗಾರಿಕೆ ಕ್ಷೇತ್ರದಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಹೈನೋದ್ಯಮ ಬೆಳೆಸಬೇಕು ಎಂದು ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.

ತಾಲೂಕಿನ ಸುಂಕಾತೊಣ್ಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಜಿ.ಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು. ಹಾಲು ಉತ್ಪಾದಕರ ಸಹಕಾರ ಸಂಘಗಳು ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿವೆ. ಮನ್‌ಮುಲ್ ಒಕ್ಕೂಟವು ಸಹ ಹಾಲು ಉತ್ಪಾದಕ ರೈತರಿಗೆ ಮೇವುಕತ್ತರಿಸುವ ಯಂತ್ರ, ರಬ್ಬರ್ ಮ್ಯಾಟ್, ಹಾಲು ಕರೆಯುವ ಯಂತ್ರ, ವಿಮೆ ಸೌಲಭ್ಯ ಸೇರಿದಂತೆ ಅನೇಕ ಸವಲತ್ತುಗಳನ್ನು ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿದೆ. ಇವುಗಳ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕೆಲಸವನ್ನು ಸಂಘದ ಅಧಿಕಾರಿಗಳ ವರ್ಗ ಮಾಡಬೇಕು. ಉತ್ಪಾದಕರು ಸಹ ಒಕ್ಕೂಟದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಯುವಕರು ನಗರ ಪ್ರದೇಶದ ಉದ್ಯೋಗವನ್ನು ತ್ಯಜಿಸಿ ಗ್ರಾಮೀಣ ಪ್ರದೇಶಗಳ ಕಡೆಗೆ ಆಗಮಿಸಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ಹೈನೋಧ್ಯಮವಾಗಿ ಬೆಳೆಯಲಿದೆ ಎಂದರು.

ಉಪಾಧ್ಯಕ್ಷ ಎಸ್.ಎಸ್.ಹೇಮಂತ್‌ಕುಮಾರ್, ನಿರ್ದೇಶಕರಾದ ಜೆ.ದೇವೇಗೌಡ, ಕಾಳೇಗೌಡ, ರಾಮಚಂದ್ರ, ಯಶೋದಮ್ಮ, ಆರ್.ಸವೀನ, ಸತೀಶ್, ಲೋಕೇಶ್, ಅಪ್ಪುಗೌಡ, ಸಿ.ಎಸ್.ಲೋಕೇಶ್, ಮಾರ್ಗವಿಸ್ತರಣಾಧಿಕಾರಿ ಸಿ.ಎನ್.ಮಧುಶಂಕರ್, ಡೇರಿ ಕಾರ್ಯದರ್ಶಿ ಎಸ್.ಕೆ.ರವಿ, ಎಸ್.ಪಿ.ನವೀನ್, ಸಿಬ್ಬಂದಿ ಎಸ್.ಎನ್.ಮಹೇಶ್, ಎಂ.ಎಸ್.ವರಲಕ್ಷ್ಮೀ, ಗ್ರಾಮಸ್ಥರು ಭಾಗವಹಿಸಿದ್ದರು.