ಜಿಲ್ಲೆ

ಯುವಕರು ಸುಸಂಸ್ಕೃತರಾಗಲಿ

ಅಥಣಿ ಗ್ರಾಮೀಣ: ಇಂದಿನ ಮಕ್ಕಳಲ್ಲಿ ಸಂಸ್ಕೃತಿ ಹಾಗೂ ಸಂಸ್ಕಾರಗಳ ಕೊರತೆ ಹೆಚ್ಚುತ್ತಿದೆ. ಹೀಗಾಗಿ, ಮಠ-ಮಂದಿರಗಳಲ್ಲಿ ನಡೆಯುವ ಸತ್ಸಂಗಳಲ್ಲಿ ಭಾಗಿಯಾಗುವ ಮೂಲಕ ಯುವಕರು ಸುಸಂಸ್ಕೃತವಂತರಾಗಬೇಕು ಎಂದು ಹಂಚಿನಾಳ ಆಶ್ರಮದ ಮಹೇಶಾನಂದ ಸ್ವಾಮೀಜಿ ಹೇಳಿದರು.

ಅಥಣಿ ತಾಲೂಕಿನ ನಂದಗಾಂವ ಗ್ರಾಮದ ಭೂಕೈಲಾಸ ಮಂದಿರದಲ್ಲಿ ದತ್ತ ಜಯಂತಿ ಹಾಗೂ ಅವಜೀಕರ ಮಹಾರಾಜರ 119ನೇ ಜಯಂತ್ಯುತ್ಸವದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ವಿಮಲಬ್ರಹ್ಮ ನಿರೂಪಣೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಮಾನವ ಜನ್ಮ ದೊಡ್ಡದು. ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳನ್ನು ರೂಢಿಸಿದಲ್ಲಿ ಆದರ್ಶ

ವ್ಯಕ್ತಿಗಳಾಗಲು ಸಾಧ್ಯವಾಗುತ್ತದೆ. ವಾದವಿರುವ ಮಾತಿಗಿಂತ ಸ್ವಾಧವಿರುವ ಮೌನವೇ ಶ್ರೇಷ್ಠವಾಗಿದೆ ಎಂದು ತಿಳಿಸಿದರು.

ಯಕ್ಕಂಚಿ ಗುರುದೇವಾಶ್ರಮದ ಗುರುಪಾದ ಸ್ವಾಮೀಜಿ, ಶೇಗುಣಸಿಯ ಹನುಮಂತ ಮಹಾರಾಜರು ಮಾತನಾಡಿ, ತ್ಯಾಗ, ಪರಿಶ್ರಮ, ತಾಳ್ಮೆಯಿಂದ ಮಾತ್ರ ವಿಮಲ ಬ್ರಹ್ಮನಾಗಲು ಸಾಧ್ಯವಾಗುತ್ತದೆ. ಆಸೆ, ಮೋಹ, ಮದ, ಮತ್ಸರಗಳನ್ನು ತ್ಯಾಗ ಮಾಡಬೇಕು ಎಂದರು.

ಭೂಕೈಲಾಸ ಮಂದಿರದ ಪೀಠಾಧ್ಯಕ್ಷ ಮಹಾದೇವ ಮಹಾರಾಜರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಪ್ಪಾಸಾಹೇಬ ಅಡಹಳ್ಳಿ ದಾಸಬೋಧ ವಾಚಿಸಿದರು.

ಲಕ್ಕಪ್ಪ ಶರಣರು, ಬಾಳು ಶರಣರು, ಅಡವಯ್ಯ ಸ್ವಾಮೀಜಿ, ಶಿವಲಿಂಗ ಶರಣರು, ಮಲ್ಲಪ್ಪ ಶರಣರು, ಪ್ರಕಾಶ ಮಹಾರಾಜರು, ಸಿಪಿಐ ಮಲ್ಲಿಕಾರ್ಜುನ ಸಿಂಧೂರ, ರಾಜಕುಮಾರ ಅಡಹಳ್ಳಿ, ಬಸಪ್ಪ ಗುಮಟಿ, ಮತ್ತಪ್ಪ ಸಂತಿ, ಚಿದಾನಂದ ಗುರುಸ್ವಾಮಿ, ಶಿವರಾಯ ಯಲಿಹಡಲಗಿ, ಶ್ರೀಶೈಲ ನಾಯಿಕ, ಗುರಪ್ಪ ಮಗದುಮ್ಮ ಇತರರಿದ್ದರು. ಆನಂದ ಕುಲಕರ್ಣಿ ಹಾಗೂ ಶಿವಲಿಂಗಯ್ಯಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.