ಸವದತ್ತಿ ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಲ್ಪಿತ ಸಂಸತ್ತು ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ವಿರೂಪಾಕ್ಷ ಮಾಮನಿ ಉದ್ಘಾಟಿಸಿದರು. ಡಾ.ಎಂ.ಪಿ.ಜಂಗವಾಡ, ಪದ್ಮಾವತಿ ಹಿರೇಮಠ, ಮಮ್ತಾಜ್ ತೆಕ್ಕೆಡ್ ಇತರರಿದ್ದರು. 
ಜಿಲ್ಲೆ

ಯುವಕರು ಸಮಾಜ ಸೇವೆ ಮಾಡಲು ರಾಜಕೀಯಕ್ಕೆ ಬರಲಿ

ಸವದತ್ತಿ: ರಾಜಕೀಯವೆಂಬುದು ವ್ಯಾಪಾರವಾಗಬಾರದು, ಸಮಾಜ ಸೇವೆ ಮಾಡುವವರು ಮಾತ್ರ ರಾಜಕೀಯ ಕ್ಷೇತ್ರಕ್ಕೆ ಬರಬೇಕೆಂದು ಬೆಳ್ಳುಬ್ಬಿ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ವಿರೂಪಾಕ್ಷ ಮಾಮನಿ ಹೇಳಿದರು.

ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್.ವಿ.ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗವು ಬುಧವಾರ ಹಮ್ಮಿಕೊಂಡಿದ್ದ ಕಲ್ಪಿತ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಯುವಕರು ರಾಜಕೀಯ ಕ್ಷೇತ್ರದತ್ತ ಪ್ರವೇಶಿಸಬೇಕು. ಜನರ ಕಷ್ಟಗಳಿಗೆ ಸ್ಪಂದಿಸು ಗುಣ ಬೆಳಸಿಕೊಳ್ಳಬೇಕು ಎಂದರು.

ಹಾವೇರಿ, ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ನಿಪ್ಪಾಣಿ, ಹಳಿಯಾಳ, ಕಿತ್ತೂರು ಕಾಲೇಜುಗಳ 120 ವಿದ್ಯಾರ್ಥಿಗಳು ಭಾಗವಹಿಸಿದ್ದರು. ತೀರ್ಪುಗಾರರಾಗಿ ಡಾ.ಎಂ.ಪಿ.ಜಂಗವಾಡ ಮತ್ತು ಪ್ರೊ. ಮೋಹನ್ ಕಲಸೂರು ಕಾರ್ಯ ನಿರ್ವಹಿಸಿದರು. ಪ್ರಾಚಾರ್ಯ ಮಾರುತಿ ದೊಂಬರ ಅಧ್ಯಕ್ಷತೆ ವಹಿಸಿದ್ದರು, ಪ್ರೀತಿ ಪಾಟೀಲ ಪ್ರಾರ್ಥಿಸಿದರು. ರಾಜ್ಯಶಾಸ ವಿಭಾಗದ ಮುಖ್ಯಸ್ಥೆ ಜಿ.ಕೆ.ಅಕ್ಕಿ ಸ್ವಾಗತಿಸಿದರು. ಎ.ಎ.ಹಳ್ಳೂರು ವಂದಿಸಿದರು. ಪದ್ಮಾವತಿ ಹಿರೇಮಠ, ಮಮ್ತಾಜ್ ತೆಕ್ಕೆಡ್ ನಿರೂಪಿಸಿದರು.