ಕಕ್ಕೇರಾ ಬಳಿಯ ಬೂದಗುಂಪಿದೊಡ್ಡಿಯ ಶ್ರೀ ರೇವಣಸಿz್ದೆÃಶ್ವರ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡ ಕರ‍್ಯಕ್ರಮವನ್ನು ಶಾಸಕರ ಸಹೋದರ ರಾಜಾ ವಿಜಯಕುಮಾರ ನಾಯಕ ಉದ್ಘಾಟಿಸಿದರು. ಕನಕಗುರು ಪೀಠದ ಶ್ರೀ ಸಿದ್ಧರಾಮಾನಂದಪುರಿ ಸ್ವಾಮೀಜಿ, ಶ್ರೀ ಶಾಂತಮಯ ಸ್ವಾಮೀಜಿ, ಶ್ರೀ ಗುರುಬಸವ ಸ್ವಾಮೀಜಿ, ರಾಜಾ ಮುಕುಂದ ನಾಯಕ ಇತರರಿದ್ದರು. 
ಜಿಲ್ಲೆ

ಯುವಕರು ದೇಶಾಭಿಮಾನ ಬೆಳೆಸಿಕೊಳ್ಳಿ

ಕಕ್ಕೇರಾ: ಯುವಕರು ಮೋಜಿನಾಟದಂತ ವ್ಯಾಮೋಹ ತ್ಯಜಿಸಿ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಕನಕಗುರು ಪೀಠದ ಶ್ರೀ ಸಿದ್ಧರಾಮಾನಂದಪುರಿ ಸ್ವಾಮೀಜಿ ಹೇಳಿದರು.

ಇಲ್ಲಿನ ಬೂದಗುಂಪಿದೊಡ್ಡಿಯ ರೇವಣಸಿz್ದÉÃಶ್ವರ ಮಹಾಸಂಸ್ಥಾನ ಮಠ ಶುಕ್ರವಾರ ಆಯೋಜಿಸಲಾಗಿದ್ದ ಗುರುವಂದನಾ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ನಿಮಿತ್ತ ರಾಜ್ಯಮಟ್ಟದ ಮುಕ್ತ ರಸಪ್ರಶ್ನೆ ಕರ‍್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ರೇವವಸಿz್ದÉÃಶ್ವರ ಮಠ ಹಲವು ವರ್ಷದಿಂದ ಇಂತಹ ಕಾರ್ಯಕ್ರಮ ಏರ್ಪಡಿಸುವ ಮೂಲಕ ಈ ಭಾಗದಲ್ಲಿ ಮಾದರಿಯಾಗಿದೆ. ಯುವಕರು ಟಿವಿ ಮತ್ತು ಮೊಬೈಲ್‌ನಂತ ಗೀಳು ಬಿಟ್ಟು ಶಿಕ್ಷಣ ಮತ್ತು ದೇಶಾಭಿಮಾನದ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ಸಹೋದರ ರಾಜಾ ವಿಜಯಕುಮಾರ ನಾಯಕ ಮತ್ತು ಜೆಡಿಎಸ್ ಮುಖಂಡ ದೇವಿಂದ್ರಪ್ಪ ಬಳಿಚಕ್ರ ಸಂಗೊಳ್ಳಿ ರಾಯಣ್ಣ ಕುರಿತು ಮಾತನಾಡಿದರು.

ಅಗತೀರ್ಥದ ಶ್ರೀ ಶಾಂತಮಯ ಸ್ವಾಮೀಜಿ, ಶರಭಯ್ಯ ಸ್ವಾಮೀಜಿ, ನಂದಣ್ಣಪ್ಪ ಪೂಜಾರಿ, ಕೆಂಚರಾಯ ಪೂಜಾರಿ, ಶಿವಣ್ಣ ಮಂಗಿಹಾಳ, ರಾಜಾ ಮುಕುಂದನಾಯಕ, ಮಲ್ಲಣ್ಣ ಐಕೂರ, ಪ್ರವೀಣಕುಮಾರ, ರಮೇಶ ತೆಗ್ಗಿನಮನಿ, ನಿಂಗಯ್ಯಗೌಡ ಬೂದಗುಂಪಿ, ಗುಂಡಪ್ಪ ಸೊಲಾಪುರ, ಬಸಯ್ಯ ಸ್ವಾಮಿ, ಕಾಳಪ್ಪ ಕವಾತಿ, ನಂದಣ್ಣ ಬಾಕ್ಲಿ, ರವಿಚಂದ್ರ ಸಾಹುಕಾರ, ಪರಮಣ್ಣ ನಿಲೋಗಲ್, ರಾಧಿಕಾ ಬಿರಾದಾರ, ಬಸಯ್ಯಸ್ವಾಮಿ, ಕೆ.ಗವಿಸಿz್ದÉÃಶ ಹೊಗರಿ, ಮಲ್ಲಣ್ಣ ಹುಲಿಕೇರಿ, ಬೀರಲಿಂಗ ಬಾದ್ಯಾಪುರ, ಮಲ್ಲಿಕಾರ್ಜುನಗೌಡ ಬೂದಗುಂಪಿ, ಗ್ಯಾನಪ್ಪ ಮೇಟಿ, ನಂದಕುಮಾರ ಸಿದ್ದಾಪುರ, ಸೋಮು ಪೀರಗಾ ಇತರರಿದ್ದರು. ಶ್ರೀ ಗುರುಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

ನಂತರ ನಡೆದ ರಾಜ್ಯಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆಯಲ್ಲಿ 70 ತಂಡಗಳು ಭಾಗವಹಿಸಿದ್ದವು. ಅಂತಿವಾಗಿ ಕಲಬುರಗಿಯ ವಿಶ್ವನಾಥ ಪ್ರಥಮ ಸ್ಥಾನ ಪಡೆದು 20 ಸಾವಿರ ನಗದು, ಸುರಪುರದ ಮಂಜುನಾಥ ಬಾದ್ಯಾಪುರ ದ್ವಿತೀಯ ಸ್ಥಾನ ಗಳಿಸಿ 15 ಸಾವಿರ, ಧಾರವಾಡದ ಮಂಜುನಾಥ ತೃತೀಯ ಸ್ಥಾನ ಪಡೆದು 10 ಸಾವಿರ ನಗದು ನೀಡಿ ಅವರನ್ನು ಸನ್ಮಾನಿಸಲಾಯಿತು.

ಯಮನೂರಪ್ಪ ಚೌಡಾಪುರ ಸ್ವಾಗತಿಸಿದರು. ದೇವಣ್ಣ ಕುರಿ ಪರಿಚಯಿಸಿದರು. ಸಿದ್ದು ಕಾಳಗಿ ವಂದಿಸಿದರು. ಸಿದ್ದು ಪೂಜಾರಿ ನಿರೂಪಣೆ ಮಾಡಿದರು.