ಜಿಲ್ಲೆ

ಯುವಕರು ಅನ್ವೇಷಣಾತ್ಮಕ ಚಿಂತನೆ ಬೆಳಸಿಕೊಳ್ಳಿ

ಬಾಗಲಕೋಟೆ: ಪ್ರಪಂಚದ ವಿಜ್ಞಾನ ಕ್ಷೇತ್ರಕ್ಕೆ ಭಾರತೀಯ ವಿಜ್ಞಾನಿಗಳು ಅಪಾರ ಕೊಡುಗೆಗಳನ್ನು ನೀಡಿದ್ದು, ಯುವಕರು ತಮ್ಮ ಅಧ್ಯಯನಗಳಲ್ಲಿ ಅನ್ವೇಷಣಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಅರುಣಕುಮಾರ ಗಾಳಿ ಹೇಳಿದರು.

ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಮತ್ತು ವಿಜ್ಞಾನ ಸಂಘದ ಅಡಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟಿçÃಯ ವಿಜ್ಞಾನ ದಿನಾಚರಣೆಯಲ್ಲಿ ಭಾರತ ರತ್ನ ಸರ್ ಸಿ.ವಿ.ರಾಮನ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ವಿಚಾರಗಳನ್ನು ಅರಿತುಕೊಂಡು ಉತ್ತಮವಾದ ಸಮಾಜವನ್ನು ನಿರ್ಮಾಣ ಮಾಡಬೇಕು. ಜಾಗತೀಕ ನಾಯಕತ್ವಕ್ಕಾಗಿ ಭಾರತೀಯ ಯುವಕರು ವೈಜ್ಞಾನಿಕ ಸಬಲೀಕರಣಗೊಳಿಸುವ ಧ್ಯೇಯವನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಐಕ್ಯೂಎಸಿ ಸಂಚಾಲಕ ಡಾ. ಪ್ರಭುದೇವ ಮಂಡಿ ಮಾತನಾಡಿ, ನೋಬೆಲ್ ಪ್ರಶಸ್ತಿ ಪುರಷ್ಕೃತ ಸರ್ ಸಿ.ವಿ.ರಾಮನ್ ಅವರ ಬದುಕು ಹಾಗೂ ಸಾಧನೆಗಳು ಅನನ್ಯವಾಗಿವೆ. ಇಂದಿನ ಯುವ ಸಮೂಹವು ವಿಜ್ಞಾನ ರಂಗದಲ್ಲಿ ಆಸಕ್ತಿ ಮತ್ತು ಅಭಿರುಚಿ ಬೆಳೆಸಿಕೊಂಡು, ಸಾಧಕ ವಿಜ್ಞಾನಿಗಳ ಬದುಕು ಸ್ಪೋರ್ತಿಯಾಗಿ ಪಡೆಯಬೇಕು ಎಂದು ಹೇಳಿದರು.

ಸಾಂಸ್ಕೃತಿಕ ವಿಭಾಗದ ಸಂಚಾಲಕ ಡಾ.ಜಿ.ಜಿ.ಹಿರೇಮಠ ಮಾತನಾಡಿ, ವಿದ್ಯಾವಂತರು ಸಮಾಜದಲ್ಲಿ ಅಜ್ಞಾನವನ್ನು ಪ್ರಶ್ನಿಸುವ ಮೂಲಕ ಜ್ಞಾನವನ್ನು ಸಂಪಾದನೆ ಮಾಡಿ, ವಿಜ್ಞಾನದಡೆಗೆ ಶೋಽಸುವ ಮನೋಭಾವವನ್ನು ಬೆಳೆಸಿಕೊಂಡರೆ ವಿಜ್ಞಾನಿಗಳಾಗಿ, ತತ್ವಜ್ಞಾನಿಗಳಾಗಿ ಪರಮ ಜ್ಞಾನವನ್ನು ಪಡೆಯಲು ಸಾಧ್ಯವಿದೆ ಎಂದರು.

ಐಕ್ಯೂಎಸಿ ಸಹ ಸಂಚಾಲಕರಾದ ಡಾ.ಮೂಬಿನ್ ಬೆಳಗಾಮ್, ವಿಜ್ಞಾನ ಸಂಘದ ಸಂಚಾಲಕಿ ಪ್ರೊ.ಸವಿತಾ ಬಾದಾಮಿ ಉಪಸ್ಥಿತರಿದ್ದರು. ಸುಜಾತ ನಾವಿ ಪ್ರಾರ್ಥಿಸಿದರು, ಡಾ.ಚಂದ್ರಶೇಖರ ಕಾಳನ್ನವರ ನಿರೂಪಿಸಿದರು.