ಜಿಲ್ಲೆ

ಯುವಕರಲ್ಲಿ ಮಾನವೀಯ ಮೌಲ್ಯಗಳು ಬೆಳೆಸಿ

ಚಿಂಚೋಳಿ : ಇಂದಿನ ಆಧುನಿಕ ಯುಗದಲ್ಲಿ ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವುದು ಆತಂಕಕಾರಿಎಂದು ನಡುವಿನ ಮಠದ ಪೀಠಾಧಿಪತಿ
ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯರು ನುಡಿದರು.
ರಟಕಲ್ ಗ್ರಾಮದ ವಿರಕ್ತ ಮಠದಲ್ಲಿ ಮುರಗೇಂದ್ರ ಶಿವಯೋಗಿಗಳ 57ನೇ ಜಾತ್ರಾ ಮಹೋತ್ಸವ ನಿಮಿತ್ತ ಉಚಿತ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿದ ಅವರು, ದಾನಗಳಲ್ಲಿ ರಕ್ತದಾನವು ಅತ್ಯಂತ ಶ್ರೇಷ್ಠವಾದುದು ಎಂದರು.
ಯುವಕರಲ್ಲಿ ಪೋಷಕರು ಉತ್ತಮ ಸಂಸ್ಕೃತಿಯೊಂದಿಗೆ ಮಾನವೀಯ ಮೌಲ್ಯಗಳನ್ನು ಬಿತ್ತಬೇಕು. ಪರರಿಗೆ ಉಪಕಾರಿಯಾಗಿ ಸನ್ಮಾರ್ಗದಲ್ಲಿ ಜೀವನ ಸಾಗಿಸುವ ಮೌಲ್ಯಗಳು ಬೆಳೆಸಬೇಕು ಎಂದು ಹೇಳಿದರು.
ಗ್ರಾಮದಲ್ಲಿನ ಎರಡು ಮಠಗಳು ಭಕ್ತರ ಎರಡು ಕಣ್ಣುಗಳಿದ್ದಂತೆ ಶಿವಯೋಗಿಗಳ, ಶಿವಾಚಾರ್ಯರ ಆಶೀವರ್ಾದ ಪಡೆದು ಭಕ್ತರು ಪುನೀತರಾಗಬೇಕು ಎಂದರು.
ನಂತರ ಯುವಕರು ಸ್ವಯಂ ಪ್ರೇರಿತವಾಗಿ 41 ಜನ ರಕ್ತದಾನ ಮಾಡಿದರು. ಶ್ರೀ ಸಿದ್ದರಾಮ ಸ್ವಾಮೀಜಿ, ಡಾ.ಜ್ಯೋತಿ, ಡಾ. ರಾಜೇಶ್ವರಿ, ಲಕ್ಷ್ಮಿಕಾಂತ, ಹಣಮಂತ, ಮೂಲಶೇಖ, ರೇವಣಸಿದ್ದ ಬಡಾ, ರಾಘವೇಂದ್ರ ಗುಂಡಾನೂರ್, ಶಿವಕುಮಾರ ಚಿಕ್ಕಅಗಸಿ, ಶಂಕರ ಚೌಕಾ, ರಾಜು ಹಂದ್ರೋಳ್ಳಿ, ಜಗನ್ನಾಥ ಮಳ್ಳಪ್ಪ, ನೀಲಕಂಠ ಬಟಗೇರಾ, ಶಂಭುಲಿಂಗಯ್ಯ ಹಿರೇಮಠ, ಆಕಾಶ ಸಾಲಿಮಠ, ವಿರೇಶ ರಾವೂರ್, ಜಗನ್ನಾಥ ಹೊಂಡೆಕರ, ಹುಚ್ಚಪ್ಪ ಧುತ್ತರಗಿ, ವೈಜನಾಥ ಕುರಿಕೋಟ ಸೇರಿ ಅನೇಕರು ಭಕ್ತರು ಇದ್ದರು.