ಜಿಲ್ಲೆ

ಯುವಕರಲ್ಲಿ ನಾಡನುಡಿಯ ಅರಿವು ಅಗತ್ಯ

ಬಾಗಲಕೋಟೆ : ಯವ ಸಮಯದಾಯ ನಾಡು ನುಡಿಯ ಮೇಲೆ ಗೌರವವನ್ನು ಬೇಳಸಿಕೊಳ್ಳುವುದರ ಜೊತೆಗೆ ಮಾತೃಭಾಷೆಯ ಬಳಕೆಗೆ ಮುಂದಾದರೆ ಮಾತ್ರ ಪ್ರಜ್ಞಾವಂತ ಸಮಾಜ ನಿರ್ಮಾಣವಾಗುತ್ತದೆ ಎಂದು ಬಾಗಲಕೋಟೆಯ ಹಿರಿಯ ಸಾಹಿತಿ ಮಲ್ಲಿಕಾರ್ಜುನ ಯಾಳವಾರ ಹೇಳಿದರು.

ಅವರು ನಗರದ ಬಿವ್ಹಿವ್ಹಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಬುಧವಾರ ಕರ್ನಾಟಕ ಸಾಹಿತ್ಯ ಸಂಘ,ಕನ್ನಡ ವಿಭಾಗ,ಕನ್ನಡ ಸ್ನಾತಕೋತ್ತರ ವಿಭಾಗ ಹಾಗೂ ಸಾಂಸ್ಕೃತಿಕ ಸಮಿತಿ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವದ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡವು ತನ್ನದೆಯಾದ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಭಾಷೆಯಾಗಿದ್ದು ಬೇರೆ ದೇಶದವರ ಗ್ರಂಥದಲ್ಲಿಯೂ ಇರುವುದು ಹೆಮ್ಮೆಯ ಸಂಗತಿಯಾಗಿದೆ. ಭಾಷೆಯು ಭಾವನೆಗಳ ತಳಹದಿಯ ಮೇಲೆ ಹುಟ್ಟಿದ್ದು ಮಾತೃಭಾಷೆ ಮತ್ತು ಕರ್ನಾಟಕ ಏಕೀಕರಣದ ಬಗ್ಗೆ ಎಲ್ಲರೂ ಅರಿತುಕೊಳ್ಳಬೇಕು, ಕರ್ನಾಟಕದಲ್ಲಿ ಭಾಷೆಯ ಅಭಿವೃದ್ಧಿಯ ಪಥವೆ ಅವಿಸ್ಮರಣೀಯ. ನಾಡಿನ ಸೀಮೆಯನ್ನು ಕನ್ನಡದ ಕವಿಗಳು ಕವಿತೆಗಳ ಮೂಲಕ ಸೂಚಿಸಿದ್ದಾರೆ. ಭಾಷೆ , ಶ್ರದ್ದೆ, ಪ್ರೀತಿಯು ನಮ್ಮ ಸಂಸ್ಕೃತಿಯಾಗಿದ್ದು ಅದನ್ನ ಮೈಗೂಡಿಸಿಕೊಳ್ಳಬೇಕು.

ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದ್ದೆವೆ ಆದರೆ ಅದು ಆರೋಗ್ಯಕರವಾಗಿದೆಯೆ ಎಂದು ಮನನ ಮಾಡಿಕೊಳ್ಳಬೇಕಿದೆ. ಕರ್ನಾಟಕದಲ್ಲಿ ರಾಜಕೀಯ ಬಂಡಾಯದಿಂದ ಏನಾಗಿದೆ ಎಂಬುದು ಅರ್ಥೆಸಿಕೊಳ್ಳುವುದೂ ನಮ್ಮ ಹೊಣೆ. ಕಲಿಕಾರ್ಥಿಗಳು ಒಳ್ಳೆ ಮಾರ್ಗದರ್ಶನ ತೆಗೆದುಕೊಂಡು ಭಾಷಾ ಬಳಕೆ ಮತ್ತು ರಕ್ಷಣೆಗೆ ಮುಂದಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ಎಸ್. ಆರ್ ಮುಗನೂರಮಠ ಮಾತನಾಡಿ ಕನ್ನಡವು ಅತ್ಯಂತ ಸುಲಲಿತ ಮತ್ತು ಸರಳ ಭಾಷೆಯಯಾಗಿದ್ದು ಕನ್ನಡ ಸಾಹಿತ್ಯ ದೇಶದಲ್ಲೆ ಹಳೆಯ ಸಾಹಿತ್ಯವಾಗಿತ್ತು. ಅಲ್ಲದೆ ಕನ್ನಡಿಗರು ಸ್ವಾತಂತ್ರ ಪೂರ್ವದಲ್ಲೇ ವಿದೇಶದವರೊಂದಿಗೆ ವ್ಯಾಪಾರ ವಹಿವಾಟನ್ನು ಹೊಂದಿದ್ದರು ಇದು ಭಾಷೆಯ ಇತಿಹಾಸವನ್ನು ತಿಳಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಡಾ.ಕೆ.ವ್ಹಿ. ಮಠ, ಡಾ.ಎಸ್.ಡಿ.ಕೆಂಗಲಗುತ್ತಿ , ಡಾ.ಎ.ಯು.ರಾಠೋಡ, ಡಾ.ಬಸವರಾಜ.ವ್ಹಿ. ಖೋತ, ಡಾ.ವಿರುಪಾಕ್ಷಿ.ಎನ್.ಬಿ, ಸೇರಿದಂತೆ ಮಹಾವಿದ್ಯಾಲಯದ ಭೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.