ದಾಂಡೇಲಿ: ನಗರದ ಅಲೈಡ್ ಪ್ರದೇಶದ ಸಮೀಪ ಶನಿವಾರ ಸಾಯಂಕಾಲ ಕಾಳಿ ನದಿ ಪಕ್ಕದ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಮೊಸಳೆಯು ಎಳೆದುಕೊಂಡು ಹೋಗಿದೆ.
ಸುರೇಶ್ ವಸಂತ ತೇಲಿ (44) ಮೊಸಳೆ ದಾಳಿಗೊಳ sಗಾದ ವ್ಯಕ್ತಿ. ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನಾ ಸ್ಥಳದಲ್ಲಿ ಪೌರಾಯುಕ್ತ ರಾಜಾರಾಮ ಪವಾರ, ನಗರಸಭೆ ಅಧ್ಯಕ್ಷೆ ಸರಸ್ವತಿ ರಜಪೂತ, ಡಿವೈಎಸ್ಪಿ ಕೆ. ಎಲ್ .ಗಣೇಶ, ಸಿಪಿಐ ಬಿ. ಎಸ್. ಲೋಕಾಪುರ, ವಾರ್ಡ್ ಸದಸ್ಯೆ ಪ್ರೀತಿ ನಾಯರ್, ನಗರ ಪೊಲೀಸ್ ಠಾಣೆಯ ಪಿಎಸ್ಐ ಕಿರಣ ಪಾಟೀಲ ಇತರರು ಭೇಟಿ ನೀಡಿ ಸುರೇಶ ಅವರನ್ನು ಹುಡುಕುವ ಕಾರ್ಯ ನಡೆಸಿದ್ದಾರೆ.
ಮೂರನೇ ಘಟನೆ:
ಮೊಸಳೆ ದನ ಕರುಗಳನ್ನು ಎಳೆದುಕೊಂಡು ಹೋಗುವುದು ಸಾಮಾನ್ಯವಾಗಿತ್ತು. ಕೆಲ ತಿಂಗಳ ಹಿಂದೆ ಯುವಕರಿಬ್ಬರನ್ನು ಎಳೆದುಕೊಂಡು ಹೋಗಿತ್ತು. ಈ ಘಟನೆಯಿಂದ ದಾಂಡೇಲಿಗರಲ್ಲಿ ಆತಂಕ ಶುರುವಾಗಿದೆ