ಮೈಸೂರು: ಲಯನ್ಸ್ ಕ್ಲಬ್ ಆಫ್ ಮೈಸೂರು ಗೋಲ್ಡನ್ ಸಿಟಿ ವತಿಯಿಂದ ಲಯನ್ಸ್ ಎಂ.ಸಿ.ಬನ್ಸಾಲಿ ಸಹಯೋಗದಲ್ಲಿ ನಗರದ ಗಾಯತ್ರಿಪುರಂ ನಿವಾಸಿ ಆದರ್ಶ (18) ಅವರ ಬಲಗಾಲಿಗೆ ಕೃತಕ ಕಾಲು ಜೋಡಿಸಿಕೊಡಲಾಗಿದೆ.
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪುಣ್ಯಸ್ಮರಣೆ ಅಂಗವಾಗಿ ಈ ಸೇವಾ ಕಾರ್ಯ ಕೈಗೊಳ್ಳಲಾಗಿದೆ. ಅವರ ಎಡಗಾಲಿನ ಶಸ್ತ್ರಚಿಕಿತ್ಸೆಯನ್ನೂ ಕ್ಲಬ್ ವತಿಯಿಂದಲೇ ಮಾಡಿಸಿಕೊಡಲಾಗುವುದು ಎಂದು ಕ್ಲಬ್‌ನ ಕಾರ್ಯದರ್ಶಿ ಎಸ್.ಪ್ರೇಮಲೀಲಾ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
ಇವರು 4 ವರ್ಷದಿಂದ ಅಂಗವೈಕಲ್ಯದಿಂದ ಬಳಲುತ್ತಿದ್ದರು. ಇವರ ಪಾಲಕರು ಆರ್ಥಿಕವಾಗಿ ಸದೃಢರಾಗಿಲ್ಲದ ಕಾರಣ ಕೃತಕ ಕಾಲು ಜೋಡಣೆ ಸಾಧ್ಯವಾಗಿರಲಿಲ್ಲ. ನಮ್ಮ ಸಂರ್ಪಕಕ್ಕೆ ಬಂದ ಅವರಿಗೆ ವೈದ್ಯರ ಸಲಹೆ ಮೇರೆಗೆ ನೆರವು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಯಾರಿಗಾದರೂ ಕೃತಕ ಕಾಲು ಅಥವಾ ಕೈ ಅವಶ್ಯಕತೆ ಇದ್ದಲ್ಲಿ ವೈದ್ಯರ ಸಲಹೆ ಮೇರೆಗೆ ಹಾಕಿಸಿಕೊಡಲಾಗುವುದು. ಮಾಹಿತಿಗಾಗಿ ದೂ.98861 66243 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಭೂಸೇನೆಯ ನಿವೃತ್ತ ಜೂನಿಯರ್ ಕಮಿಷನ್ ಅಧಿಕಾರಿ ರಘುಕುಮಾರ್, ಕ್ಲಬ್‌ನ ಅಧ್ಯಕ್ಷ ಟಿ.ಸುರೇಶ್, ಪರಿಸರವಾದಿ ಭಾನು ಮೋಹನ್, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ.ಗಂಗಾಧರ್ ಇನ್ನಿತರರು ಇದ್ದರು.