ಕಿಕ್ಕೇರಿ: ಪ್ರತಿಭೆಯ ಕಣಜದಂತಿರುವ ನೇಕಾರ ಕುರುಹಿನಶೆಟ್ಟಿ ಸಮಾಜದ ಯುವಕರು ಗ್ರಾಮೀಣ ಪ್ರದೇಶದಲ್ಲಿ ಸಂಘಟನೆಗಾಗಿ ಕ್ರೀಡೆ ಆಯೋಜಿಸಿರುವುದು ಉತ್ತಮ ಬೆಳವಣಿಗೆ ಎಂದು ಆರ್‌ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.
ಇಲ್ಲಿನ ಕೆಪಿಎಸ್ ಮೈದಾನದಲ್ಲಿ ರಾಯಲ್‌ಶೆಟ್ಟಿ ನೇಕಾರ ಕ್ರಿಕೆಟರ್ಸ್‌ನಿಂದ ಇತ್ತೀಚೆಗೆ ಆಯೋಜಿಸಿದ್ದ ಮೂರು ದಿನಗಳ ರಾಜ್ಯ ಮಟ್ಟದ ಟೆನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿ ಸಮಾರಂಭದಲ್ಲಿ ಮಾತನಾಡಿ, ಯುವಕರು ಸಂಘಟನೆಗಾಗಿ ಕ್ರೀಡೆಯನ್ನು ಆಯೋಜಿಸಿ ಹಿಂದೆ ಪಟ್ಟಣದಲ್ಲಿ ನೇಕಾರ ಸಮಾಜ ಜನಸಂಖ್ಯೆ ಬಲುದೊಡ್ಡದಿತ್ತು. ಜೀವನ ಕಷ್ಟವಾಗಿ ಬದುಕು ಕಟ್ಟಿಕೊಳ್ಳಲು ಬಹುತೇಕ ಉದ್ಯೋಗ ಹರಿಸಿ ನಗರ ಪ್ರದೇಶಕ್ಕೆ ಹೋಗಿದ್ದಾರೆ. ನೇಕಾರ ಯುವಕರು ಕ್ರೀಡೆ ಜತೆಗೆ ಕಡ್ಡಾಯವಾಗಿ ಶಿಕ್ಷಣವನ್ನು ಭವಿಷ್ಯದ ಅಸ್ತ್ರವಾಗಿ ಸ್ವೀಕರಿಸಿ. ಕ್ರೀಡೆಗಳಲ್ಲಿ ಪ್ರತಿಭೆ ಪ್ರದರ್ಶಿಸಿ ಎಂದರು.
ಉತ್ತಮ ಕ್ರೀಡಾಪಟುಗಳಿಗೆ ಉದ್ಯೋಗ, ಶಿಕ್ಷಣದಲ್ಲಿ ವಿಶೇಷ ಮೀಸಲಾತಿ ಇದೆ. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿರುವ ಯುವ ಕ್ರೀಡಾಪಟುಗಳು ಇಲ್ಲಿನ ಪ್ರೇಕ್ಷಣಿತ ಸ್ಥಳಗಳ ಕಿರುಪರಿಚಯ ಮಾಡಿಕೊಳ್ಳಿ. ಕ್ರೀಡೆಯಲ್ಲಿ ಭಾಗವಹಿಸಿ, ಗೆಲುವಿನ ಲೆಕ್ಕಚಾರ ಬೇಡ ಎಂದರು.
ಬೆಂಗಳೂರು, ಮೈಸೂರು, ಹಾಸನ, ಗದಗ್, ದಾವಣಗೆರೆ, ಹೊಸಪೇಟೆ, ವಿಜಯನಗರ, ಕೋಲಾರ, ಮೇಲುಕೋಟೆ, ಹೊಸಹೊಳಲು ಸೇರಿದಂತೆ ವಿವಿಧೆಡೆಯಿಂದ ಸುಮಾರು 22ಕ್ಕೂ ಹೆಚ್ಚು ಕ್ರೀಡಾತಂಡಗಳು ಆಗಮಿಸಿದ್ದವು. ನೇಕಾರ ಸಮಾಜದ ಕ್ರೀಡಾಪಟುಗಳು ಪರಸ್ಪರ ಪರಿಚಯ ಮಾಡಿಕೊಂಡು ಖುಷಿಪಟ್ಟರು. ಗ್ರಾಮೀಣ ಪ್ರದೇಶದಲ್ಲಿ ಎಲ್ಲರನ್ನು ಕಲೆಹಾಕುವ ಕೆಲಸ ಮಾಡುತ್ತಿರುವ ಪ್ರಯೋಜಕರ ಶ್ರಮಕ್ಕೆ ಪ್ರಶಂಸಿದರು.
ಗ್ರಾಪಂ. ಮಾಜಿ ಅಧ್ಯಕ್ಷರಾದ ಕೆ.ವಿ.ಅರುಣಕುಮಾರ್, ಕೆ.ಆರ್.ರಾಜೇಶ್, ಕೆ.ಪಿ.ಮಂಜುನಾಥ್, ಮುಖಂಡರಾದ ಕಿರಣ್‌ಕುಮಾರ್, ಗಿರೀಶ್, ಗೋವಿಂದ ಮತ್ತಿತರರಿದ್ದರು.