ಯಾದಗಿರಿ: ಯಾವುದೇ ಕ್ಷೇತ್ರವಾಗಲಿ ಯುವ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡಾಗ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ತಿಳಿಸಿದರು.
ನಗರದ ಬಸವೇಶ್ವರ ಗಂಜ್ ಸಮೀಪದ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ಯಾದಗಿರಿ ಸರಕಾರಿ ಪದವಿ ಮಹಾವಿದ್ಯಾಲಯ ಹಾಗೂ ರಾಯಚೂರು ವಿಶ್ವ ವಿದ್ಯಾಲಯದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಯುವಕರಲ್ಲಿ ನಾಯಕತ್ವದ ಗುಣ ಬೆಳೆಸುವುದು ಎನ್ಎಸ್ಎಸ್ ಮೂಲ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಕಾಲೇಜು ಹಂತದಲ್ಲಿ ಇಂಥ ಶಿಬಿರ ಹಮ್ಮಿಕೊಳ್ಳುವ ಮೂಲಕ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ವಿದ್ಯಾಥರ್ಿಗಳು ಸ್ವಯಂ ಸೇವಕರಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ, ಉತ್ತಮ ನಾಗರಿಕರಾಗಿ ಹೊರಹೊಮ್ಮಲು ಎನ್ಎಸ್ಎಸ್ ಸಹಕಾರಿಯಾಗುತ್ತದೆ. ಪಠ್ಯೇತರ ಚಟುವಟಿಕೆ ಜತೆಗೆ ಪ್ರಾಮಾಣಿಕವಾಗಿ ಅಧ್ಯಯನ ಶೀಲರಾಗಬೇಕು. ಗುರುಗಳು ಹೇಳಿಕೊಡುವ ಪಾಠವನ್ನು ಚೆನ್ನಾಗಿ ಮನನ ಮಾಡಿಕೊಂಡು ಓದಿನಲ್ಲಿ ನಿರತರಾದರೆ ನೀವು ಇಟ್ಟುಕೊಂಡ ಗುರಿ ತಲುಪಲು ಸಾಧ್ಯ ಎಂದು ಹೇಳಿದರು.
ಸರಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಸವರ್ೋದಯ ಶಿವಪುತ್ರ ಎನ್ಎಸ್ಎಸ್ ಧ್ವಜಾರೋಹಣ ನೆರೆವೇರಿಸಿ, ಮಹಾತ್ಮ ಗಾಂಜಿ ಜನ್ಮ ಶತಮಾನೋತ್ಸವದ ಸವಿ ನೆನಪಿಗಾಗಿ 1969ರಲ್ಲಿ ಎನ್ಎಸ್ಎಸ್ ದೇಶದಲ್ಲಿ ಆರಂಭಿಸಲಾಯಿತು. ಇದು ವಿದ್ಯಾಥರ್ಿಗಳಲ್ಲಿ ದೇಶಾಭಿಮಾನವನ್ನು ಮತ್ತು ಸೌಹಾರ್ದ ಭಾವವನ್ನು ಕಲಿಸಿಕೊಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ದೇವಸ್ಥಾನದ ಅಧ್ಯಕ್ಷ ರಾಜು ಹೆಂದೆ, ಪ್ರಾಚಾರ್ಯ ಡಾ. ಸುಭಾಶ್ಚಂದ್ರ ಕೌಲಗಿ, ಉಪನ್ಯಾಸಕರಾದ ಡಾ.ದೇವೀಂದ್ರಪ್ಪ ಹಳಿಮನಿ, ಲಕ್ಷ್ಮಣ ರೆಡ್ಡಿ, ಪ್ರಹ್ಲಾದ್ ಜೋಶಿ ಇದ್ದರು.