ಬಾಗಲಕೋಟೆ: ಸಾಂಕ್ರಾಮಿಕ - ಅಸಾಂಕ್ರಾಮಿಕ ರೋಗಗಳ ಉಪಶಮನ ಮಾಡುವಲ್ಲಿ ಸಂಜೀವಿನಿಯಾಗಿದೆ. ಯುವ ವೈದ್ಯ ವಿಜ್ಞಾನಿಗಳು ಇನ್ನೂ ಹೊಸ ಹೊಸ ಸಂಶೋಧನೆ ಮಾಡಿ - ಔಷಧಗಳನ್ನು ದೃಢಪಡಿಸಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಭಾರತ ಸರ್ಕಾರದ ಆಯುಷ್ಯ ಇಲಾಖೆಯ ವಿಶೇಷ ಹೋಮಿಯೋಪಥಿ ಔಷಽ ದೃಢಪಡಿಸುವ ಕೇಂದ್ರದ ಚರ್ಮೇನ್ ಡಾ.ಶಶಿಕಾಂತ ತಿವಾರಿ ಹೇಳಿದರು.
ನಗರದ ಬಿವಿವಿ ಸಂಘದ ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉತ್ತರ ಕರ್ನಾಟಕದ ಪ್ರಪ್ರಥಮ ಕೇಂದ್ರೀಯ ಹೋಮಿಯೋಪಥಿ ದೃಢಪಡಿಸುವ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಹೋಮಿಯೋಪಥಿ ವೈದ್ಯ ಪದ್ಧತಿಯು ಅತ್ಯಂತ ವೈಜ್ಞಾನಿಕವಾಗಿದ್ದು, ಅತೀ ವೇಗವಾಗಿ ಜನಪ್ರಿಯಗೊಳ್ಳುತ್ತಿರುವ ಹಾಗೂ ಹೋಮಿಯೋಪಥಿ ಸಾಂಕ್ರಾಮಿಕ - ಅಸಾಂಕ್ರಾಮಿಕ ರೋಗಗಳ ಉಪಶಮನ ಮಾಡುವಲ್ಲಿ ಸಂಜೀವಿನಿಯಾಗಿದೆ. ಕ್ರಿಯಾಶೀಲ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಪ್ರಯತ್ನದ -Àಲವಾಗಿ ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಹೋಮಿಯೋಪಥಿ ಔಷಧ ದೃಢಪಡಿಸುವ ಕೇಂದ್ರ ಈ ಕಾಲೇಜಿಗೆ ಸಿಕ್ಕಿದೆ. ಎಲ್ಲರೂ ಒಕ್ಕಟ್ಟಿನಿಂದ, ದಣಿವಿಲ್ಲದೇ, ಶ್ರದ್ಧಾ-ಭಕ್ತಿಯಿಂದ ಕ್ರಿಯಾಶೀಲರಾಗಿ ಶ್ರಮಿಸಿ ನಿಮಗೆ ನೀಡಿರುವ ಸದಾವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸAಪನ್ಮೂಲ ವ್ಯಕ್ತಿ ಹಿರಿಯ ಹೋಮಿಯೋ ವೈದ್ಯ ವಿಜ್ಞಾನಿ ಡಾ.ಪ್ರೀತಾ ಮೆಹರಾ ವಿವಿಧ ಸಂಶೋಧನೆ ಹಾಗೂ ಹೋಮಿಯೋಪಥಿ ಔಷಧ ದೃಢಪಡಿಸುವ ಕುರಿತು ಉಪನ್ಯಾಸ ನೀಡಿದರು.
ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಮಾತನಾಡಿ, ಶೈಕ್ಷಣಿಕ ಕ್ರಾಂತಿಯ ಮೂಲಕ ಕರ್ನಾಟಕದಲ್ಲಿ ಹೆಸರುವಾಸಿಯಾಗಿರುವ ಬಿವಿವಿ ಸಂಘದ ಹೋಮಿಯೋಪಥಿ ಮೆಡಿಕಲ್ ಕಾಲೇಜಗೆ ಕೇಂದ್ರ ಆಯುಷ್ಯ ಇಲಾಖೆ ಮಂಜೂರು ಮಾಡಿರುವುದಕ್ಕೆ ನಮ್ಮ ಸಂಸ್ಥೆ ಆಭಾರಿಯಾಗಿದೆ. ನಾವು ಈ ನಿಟ್ಟಿನಲ್ಲಿ ತನು-ಮನ-ಧನಗಳಿಂದ ಶ್ರಮಿಸುತ್ತೇವೆ ಎಂದರು.
ಪ್ರಾಚಾರ್ಯ ಡಾ.ಅರುಣ ಹೂಲಿ ಮಾತನಾಡಿ, ಕೇವಲ ೫ ವರ್ಷಗಳಲ್ಲಿ ಭಾರತದ ಹೋಮಿಯೋಪಥಿ ವಿಜ್ಞಾನ ರಂಗದಲ್ಲಿ ಬಹಳಷ್ಟು ಸಾಧನೆ ಮಾಡುತ್ತಿದೆ. ಬಿವಿವಿ ಸಂಘವು ಈ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದೆ ಎಂದು ತಿಳಿಸಿದರು.
ಪ್ರಾರಂಭದಲ್ಲಿ ಪ್ರಾಧ್ಯಾಪಕಿ ಡಾ.ನುಸ್ರತ ಜಮಾದಾರ ಕಾಲೇಜಿನ ಹೆಜ್ಜೆ ಗುರುತುಗಳನ್ನು ಕುರಿತು ಮಾತನಾಡಿದರು. ಡಾ.ತೃಪ್ತಿ ಶಿಂಧೆ ಸ್ವಾಗತಿಸಿದರು. ಡಾ.ಹಾಜಿಮಲಿಂಗ ತಾಂಬೋಲಿ ವಂದಿಸಿದರು. ಡಾ.ಪ್ರದೀಪ ಕೆ ನಿರೂಪಿಸಿದರು. ಪ್ರಾಧ್ಯಾಪಕರಾದ ಡಾ.ರವಿ.ಎಸ್.ಕೋಟೆಣ್ಣವರ. ಡಾ.ಸುಽÃರ ಬೆಟಗೇರಿ. ಡಾ.ರುದ್ರೇಶ ಕೊಪ್ಪಳ, ಡಾ.ಅಮರೇಶ ಬಳಗಾನೂರ. ಡಾ.ವಿಜಯಲಕ್ಷಿ÷್ಮÃ ಪಾಟೀಲ, ಡಾ.ಅಖಿಲಾ ಹುಲ್ಲೂರ, ಡಾ.ಫಾತಿಮಾ ಬಾಲಸಿಂಗ, ಡಾ.ದೀಪಕ ನಾಯಕ, ಡಾ.ಶಶಿಕುಮಾರ ಇಜೇರಿ ಉಪಸ್ಥಿತರಿದ್ದರು.