ಕಂಪ್ಲಿ: ಪಟ್ಟಣದ ಗಂಗಾಸಂಕೀರ್ಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಾಹಿತಿ ಡಾ.ನಾ.ಡಿಸೋಜ ಅವರಿಗೆ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ಮಾತನಾಡಿ, ನಾ.ಡಿಸೋಜ ನಿಧನದಿಂದ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆಗೆ ಕಂಪ್ಲಿಗೆ ಬಂದಿದ್ದರು. ನಾ.ಡಿಸೋಜ ಅವರ ಸರಳ ಸಜ್ಜನಿಕೆ ಆದರ್ಶವಾಗಿದೆ. ಮಾನವೀಯ ಕಳಕಳಿಯುಳ್ಳ ಅವರ ಸಾಹಿತ್ಯದ ಕೃಷಿ ಇಂದಿನ ಯುವ ಲೇಖಕರಿಗೆ ದಾರಿದೀಪದಂತಿದೆ ಎಂದರು.